Sunday, November 3, 2024
Homeಟಾಪ್ ನ್ಯೂಸ್ಇಂದು ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮರಥೋತ್ಸವ

ಇಂದು ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮರಥೋತ್ಸವ

ಮಂಡ್ಯ: ವಿಶ್ವ ವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮರಥೋತ್ಸವಕ್ಕೆ ಇಂದು ಜಿಲ್ಲಾಧಿಕಾರಿ ಗೋಪಾಲಕೃಷ್ಣ ಚಾಲನೆ ನೀಡಿದ್ದಾರೆ.

ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಶ್ರೀಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ.

ಜಿಲ್ಲಾಡಳಿತದ ಖಜಾನೆಯಿಂದ ರತ್ನಖಚಿತ ವೈರಮುಡಿ ಮೇಲುಕೋಟೆಗೆ ರವಾನಿಸಲಾಗಿದ್ದು, ಸ್ಥಾನಿಕ ಅರ್ಚಕರು ಪರಕಾಲ ಮಠದ ವಾಹನದಲ್ಲಿ ಭದ್ರತೆಯೊಂದಿಗೆ ವೈರಮುಡಿ ಕೊಂಡೊಯ್ದದರು.

ಮಂಡ್ಯ ನಗರದ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವೈರಮುಡಿಗೆ ಮೊದಲ ಪೂಜೆ ನಡೆಯಿತು. ವೈರಮುಡಿ ರವಾನೆಗೂ ಮುನ್ನ ಖಜಾನೆಯಲ್ಲಿ ವೈರಮುಡಿಗೆ ಡಿಸಿ, ಎಸ್ಪಿ, ಎಸಿ, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ಮಂಡ್ಯ ಶ್ರೀರಂಗಪಟ್ಟಣ ಪಾಂಡವಪುರ ಮಾರ್ಗದಲ್ಲಿ ವೈರಮುಡಿ ಮೇಲುಕೋಟೆ ತಲುಪಿತು. ವೈರಮುಡಿ ಸಾಗುವ ಮಾರ್ಗದ ಪ್ರತಿ ಗ್ರಾಮದಲ್ಲೂ ಗ್ರಾಮಸ್ಥರು ವೈರಮುಡಿಗೆ ಪೂಜೆ ಸಲ್ಲಿಸಿದರು. ಪೂಜೆ ವೇಳೆ ಚೆಲುವನಾರಾಯಣಸ್ವಾಮಿಗೆ ಜೈಕಾರದ ಮೊಳಗಿದವು.

ಶನಿವಾರ ರಾತ್ರಿ 8.30ಕ್ಕೆ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಕಿರೀಟ ಧಾರಣೆ ಮಾಡಿಲಾಗುತ್ತದೆ. ಉತ್ಸವ ಮೂರ್ತಿಯ ಮೆರವಣಿಗೆ ರಾತ್ರಿಯಿಡೀ ನಡೆಯಲಿದೆ. ಉತ್ಸವದ ಅಂಗವಾಗಿ ಇಡೀ ಮೇಲುಕೋಟೆ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ.

ಹೆಚ್ಚಿನ ಸುದ್ದಿ

error: Content is protected !!