Saturday, March 15, 2025
Homeಟಾಪ್ ನ್ಯೂಸ್PVR: ಸಿನಿಮಾಗೆ ಮೊದಲು ಸಿಕ್ಕಾಪಟ್ಟೆ ಜಾಹೀರಾತು- ಪಿವಿಆರ್ ಸಂಸ್ಥೆಗೆ ಕೋರ್ಟ್ ಶಾಕ್!

PVR: ಸಿನಿಮಾಗೆ ಮೊದಲು ಸಿಕ್ಕಾಪಟ್ಟೆ ಜಾಹೀರಾತು- ಪಿವಿಆರ್ ಸಂಸ್ಥೆಗೆ ಕೋರ್ಟ್ ಶಾಕ್!

ಬೆಂಗಳೂರು: ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳು ಪ್ರೇಕ್ಷಕರಿಗೆ ಅತಿಹೆಚ್ಚು ಟಿಕೆಟ್ ರೇಟ್ ವಿಧಿಸುವುದು ಅಲ್ಲದೆ ಸಿನಿಮಾ ಶುರುವಾಗುವ ಮೊದಲು ಸಿಕ್ಕಾಪಟ್ಟೆ ಜಾಹೀರಾತು ಹಾಕುವ ಆರೋಪ ಇದ್ದೇ ಇದೆ. ಇದೇ ರೀತಿ ಮಾಡುತ್ತಿದ್ದ ಪಿವಿಆರ್, ಐನಾಕ್ಸ್‌ಗೆ ಈಗ ಸರಿಯಾದ ಪಾಠ ಕಲಿಸಿದೆ ಕೋರ್ಟ್. ಈ ಮೂಲಕ 28,000 ರೂಪಾಯಿ ದಂಡವನ್ನೂ ಪ್ರಯೋಗ ಮಾಡಿದೆ.

2023ರಲ್ಲಿ ಬೆಂಗಳೂರಿನ ಅಭಿಷೇಕ್ ಎಂಬುವವರು ಶ್ಯಾಮ್ ಬಹಾದ್ದೂರ್ ಸಿನಿಮಾ ವೀಕ್ಷಣೆಗೆ ಪಿವಿಆರ್‌ಗೆ ಹೋಗಿದ್ದರು. ತಮ್ಮ ಬ್ಯುಸಿ ಷೆಡ್ಯೂಲ್​ ಮಧ್ಯೆಯೂ ಅಭಿಷೇಕ್ ಸಿನಿಮಾ ಹೋಗಿ ಒಂದಷ್ಟು ರಿಲ್ಯಾಕ್ಸ್ ಆಗುವ ಪ್ಲಾನ್ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ಆರಂಭಕ್ಕೂ ಮುನ್ನ 25 ರಿಂದ 30 ನಿಮಿಷಗಳ ಜಾಹೀರಾತು ಪ್ರಸಾರ ಮಾಡಲಾಗಿತ್ತು. ಇದನ್ನು ಕಂಡು ಪ್ರೇಕ್ಷಕ ಅಭಿಷೇಕ್ ಥಿಯೇಟರ್ ಆಡಳಿತದ ಬಗ್ಗೆ ಕೋಪಗೊಂಡಿದ್ದರು.

ಪಿವಿಆರ್ & ಐನಾಕ್ಸ್‌ಗೆ ತೀವ್ರ ಆಘಾತ
ಎಷ್ಟು ನಿಮಿಷ ಜಾಹೀರಾತು ಪ್ರಸಾರ ಮಾಡುತ್ತೇವೆ? ಎಂಬುದನ್ನು ತಿಳಿಸಿರಲಿಲ್ಲ. ಇದರಿಂದ ಮಾನಸಿಕ ಹಿಂಸೆ ಆಗಿದೆ ಎಂದು, ಈ ಜಾಹೀರಾತು ಪ್ರಸಾರದ ವಿರುದ್ಧ ಗ್ರಾಹಕ ವ್ಯವಹಾರಗಳ ಕೋರ್ಟ್‌ಗೆ ಅರ್ಜಿ ಕೂಡ ಸಲ್ಲಿಸಿದ್ದರು ಅಭಿಷೇಕ್. ಬೆಂಗಳೂರು ಮೂಲದ ವ್ಯಕ್ತಿ ಸಲ್ಲಿಸಿರುವ ಅರ್ಜಿಯ ತೀರ್ಪು ಪ್ರಕಟವಾಗಿದ್ದು, ಪಿವಿಆರ್ & ಐನಾಕ್ಸ್‌ಗೆ ಆಘಾತವೇ ಎದುರಾಗಿದೆ.

28 ಸಾವಿರ ರೂಪಾಯಿ ದಂಡ

ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಪ್ರೇಕ್ಷಕನಿಗೆ 20 ಸಾವಿರ ರೂಪಾಯಿ ಪರಿಹಾರವನ್ನು ನೀಡಲು ಸೂಚಿಸಲಾಗಿದೆ. ಪಿವಿಆರ್ ಸಿನಿಮಾ, ಐನಾಕ್ಸ್‌ಗೆ ಈ ಬಗ್ಗೆ ಇದೀಗ ಕೋರ್ಟ್ ಸೂಚನೆ ನೀಡಿದೆ. ಕೋರ್ಟ್ ವೆಚ್ಚವಾಗಿ 8 ಸಾವಿರ ರೂಪಾಯಿ ಹಣವನ್ನೂ ನೀಡಬೇಕಿದೆ. ಈ ಮೂಲಕ ಇನ್ನುಮುಂದೆ ಸಿನಿಮಾ ಆರಂಭಕ್ಕೂ ಮೊದಲು ಜಾಹೀರಾತು ಹಾಕುವ ಕುರಿತು ಮಲ್ಟಿಪ್ಲೆಕ್ಸ್ ಸಂಸ್ಥೆಗಳು ಚಿಂತಿಸಬೇಕಿದೆ, ಅಂತಾ ಸಲಹೆ ನೀಡುತ್ತಿದ್ದಾರೆ ಜನ.

ಹೆಚ್ಚಿನ ಸುದ್ದಿ

error: Content is protected !!