Sunday, June 7, 2026
Homeಕ್ರೈಂSHOCKING: ಸಹೋದರನ 3 ವರ್ಷದ ಮಗುವನ್ನ ಕೊಂ*ದ ಪರಮ ಪಾಪಿ!

SHOCKING: ಸಹೋದರನ 3 ವರ್ಷದ ಮಗುವನ್ನ ಕೊಂ*ದ ಪರಮ ಪಾಪಿ!

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ (Relationship) ಬೆಲೆಯೇ ಇಲ್ಲದಂತೆ ಆಗಿದೆ. ಅದರ ಜೊತೆಗೆ ಮಾನವೀಯತೆ ಎನ್ನುವುದು ಮಾಯವಾಗಿದೆ. ಅದಕ್ಕೆ ಉತ್ತಮವಾದ ಉದಾಹರಣೆ ವ್ಯಕ್ತಿಯೊಬ್ಬ ತನ್ನ ಸಹೋದರನ ಮಗುವನ್ನ (Brother Child) ಹತ್ಯೆ ಮಾಡಿರುವುದು.

3 ವರ್ಷದ ಮಗುವನ್ನ ಕೊಂದ ಪಾಪಿ
ಪಾಪಿಯೊಬ್ಬ ತನ್ನ ಸಹೋದರನ 3 ವರ್ಷದ ಮಗುವನ್ನೇ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ನಡೆದಿದೆ. ಮಾಹಿತಿ ಪ್ರಕಾರ, ಮಾರುತಿ ವಾಲಿಕಾರ ಎಂಬ ವ್ಯಕ್ತಿಯ 3 ವರ್ಷದ ಮಗು ಅಂಗನವಾಡಿಗೆ ಹೋಗುತ್ತಿದ್ದ ಸಮಯದಲ್ಲಿ ಸಹೋದರನೇ ಈ ಕೆಲಸ ಮಾಡಿದ್ದಾನೆ. ಮಾರುತಿಯ ಸಹೋದರ ಭೀಮಪ್ಪ ವಾಲಿಕಾರ ಅಂಗನವಾಡಿಗೆ ಹೋಗುತ್ತಿರುವ ಸಮಯದಲ್ಲಿ ಅಂಗನವಾಡಿಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಸದ್ಯ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹರಿಬಿಟ್ಟ ಕಿಡಿಗೇಡಿ – ಯುವತಿ ಆತ್ಮ*ತ್ಯೆ!

ಬುದ್ದಿ ಹೇಳಲು ಕರೆಸಿ ಬೆಂಗಳೂರಿನಲ್ಲಿ ಕೊಲೆ ಯತ್ನ

ನಾವು ಸೋಷಿಯಲ್‌ ಮೀಡಿಯಾ ಬಳಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕೆಲವೊಮ್ಮೆ ಯಾರೋ ನಮಗೆ ಕಾಟ ಕೊಟ್ಟರೆ, ಇನ್ನೂ ಕೆಲವೊಮ್ಮೆ ಕಾಟ ಕೊಟ್ಟವರೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಅದೇ ರೀತಿ ಇನ್ಸ್ಟಾಗ್ರಾಮ್‍ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನಿಗೆ ಬುದ್ದಿ ಹೇಳಲು ಕರೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಹೆಚ್‍ಎಎಲ್ ನಲ್ಲಿ ನಡೆದಿದೆ. 

ಮಾಹಿತಿಗಳ ಪ್ರಕಾರ, ತಮಿಳುನಾಡು ತಿರಪ್ಪತ್ತೂರು ಮೂಲದ ಯುವಕ ಸೆಲ್ವ ಕಾರ್ತಿಕ್ ಎಂಬಾತ ಇನ್ಸ್ಟಾಗ್ರಾಮ್‍ ನಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಹೀಗೆ ಮೆಸ್ಸೇಜ್ ಮಾಡುತ್ತಾ ಮಾಡುತ್ತಾ ತನ್ನನ್ನು ಪ್ರೀತಿಸುವಂತೆ ಪೀಡಿಸಲು ಶುರು ಮಾಡಿದ್ದ. ಆಕೆ ತನಗೆ ಮದುವೆ ಆದ ಬಗ್ಗೆ ಹೇಳಿದ್ದು, ನೋ ಎಂದಿದ್ದಾಳೆ. ಆದರೆ ಇತ್ತೀಚೆಗೆ ಆತನ ಕಿರಿ ಕಿರಿ ಹೆಚ್ಚಾದ ಹಿನ್ನಲೆ ಈ ಬಗ್ಗೆ ತನ್ನ ತಂದೆಗೆ ತಿಳಿಸಿದ್ದಾರೆ. ಅದರಂತೆ ಯುವಕನ ನಂಬರ್ ಪಡೆದು ಬುದ್ದಿ ಮಾತು ಹೇಳುವ ಸಲುವಾಗಿ ಹೆಚ್ಎಎಲ್ ಬಳಿ ಬರಲು ಹೇಳಿದ್ದಾರೆ. ಅದರಂತೆ ಕಾರ್ತಿಕ್ ಹೆಚ್ಎಎಲ್ ಬಳಿ ಬಂದಿದ್ದಾನೆ. 

ಇದನ್ನೂ ಓದಿ: ಪ್ರೇಯಸಿಯನ್ನ ಬೆಂಕಿಗೆ ತಳ್ಳಲು ಯತ್ನಿಸಿದ ಪ್ರಿಯಕರ, ಗರ್ಭಿಣಿ ಮಾಡಿ ವಂಚಿಸಿದ್ದ ಕಿರಾತಕ!-VIDEO

ಅದರಂತೆ ಯುವತಿಯ ತಂದೆ ಹಾಗೂ ಸಂಬಂಧಿಕರೊಬ್ಬರು ಕಾರ್ತಿಕ್ ನನ್ನು ಬೈಕ್ ನಲ್ಲಿ ಕರೆದು ಹೋಗಿದ್ದಾರೆ. ಈ ವೇಳೆ ಚಲಿಸುತ್ತಿದ್ದ ಬೈಕ್‍ನಲ್ಲಿಯೇ ಆರೋಪಿ, ಸತೀಶ್ ಎಂಬವರ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗಾಯಾಳು ಸತೀಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. 

ಹೆಚ್ಚಿನ ಸುದ್ದಿ

Change Language »
error: Content is protected !!