Monday, August 17, 2026
Homeಕ್ರೈಂCRIME: ಇನ್ಸ್ಟಾದಲ್ಲಿ ಪರಿಚಯವಾಗಿ ನಾಲ್ಕೇ ದಿನಕ್ಕೆ ಡೇಟಿಂಗ್-‌ ಬೀಚ್‌ ಗೆ ಕರೆದೊಯ್ದು ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ...

CRIME: ಇನ್ಸ್ಟಾದಲ್ಲಿ ಪರಿಚಯವಾಗಿ ನಾಲ್ಕೇ ದಿನಕ್ಕೆ ಡೇಟಿಂಗ್-‌ ಬೀಚ್‌ ಗೆ ಕರೆದೊಯ್ದು ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ!

ಉಳ್ಳಾಲ: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ನಾಲ್ಕೇ ದಿನಕ್ಕೆ ಭೇಟಿ ಮಾಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ವಿರುದ್ಧ ಪೋಕ್ಸೋ ಕೇಸ್‌ ಅಡಿಯಲ್ಲಿ ಬಂಧಿಸಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಯನ್ನು ಅಡ್ಯಾರ್‌ ವಳಚ್ಚಿಲ್‌ ನಿವಾಸಿ ಕೆಲ್ವಿನ್‌ (24) ಎಂದು ಗುರುತಿಸಲಾಗಿದೆ. ಪಿಯುಸಿ ಮುಗಿಸಿ ನರ್ಸಿಂಗ್‌ ಶಿಕ್ಷಣಕ್ಕಾಗಿ ಕಾಯುತ್ತಿದ್ದ ಅಪ್ರಾಪ್ತೆಗೆ ಕೆಲ ದಿನಗಳ ಹಿಂದಷ್ಟೇ ಇನ್ಸ್ಟಾಗ್ರಾಮ್‌ನಲ್ಲಿ ಕೆಲ್ವಿನ್‌ ಪರಿಚಯವಾಗಿದ್ದ. ಪರಿಚಯವಾಗಿ ನಾಲ್ಕೇ ದಿನಕ್ಕೆ ಇಬ್ಬರು ಭೇಟಿಯಾಗಿದ್ದಾರೆ. ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಲಾಡ್ಜ್‌ ಒಂದರಲ್ಲಿ ರೂಂ ಕೇಳಿದ್ದಾನೆ. ಆದರೆ ಅಪ್ರಾಪ್ತೆಯಾಗಿದ್ದ ಹಿನ್ನೆಲೆ ರೂಂ ಕೊಡಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದ್ದಾರೆ.

ನಂತರ ಕೆಲ್ವಿನ್‌ ಆಕೆಯನ್ನು ಸೋಮೇಶ್ವರ ಸಮುದ್ರ ತೀರದ ಬಳಿಕರೆದುದೊಂಡು ಹೋಗಿ ಕಾರಿನೊಳಗಡೆಯೇ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಕಾರಿನಲ್ಲಿಯೇ ಮನೆ ವರೆಗೆ ಬಿಟ್ಟು ಹೋಗಿದ್ದಾನೆ. ಬೆಳಗ್ಗೆ ಹಾಗೂ ಸಂಜೆ ಬಾಲಕಿ ಯುವಕನೊಂದಿಗೆ ಕಾರಿನಲ್ಲಿ ಹೋಗುವುದನ್ನು ಸ್ಥಳೀಯರು ಕೂಡಾ ಗಮನಿಸಿದ್ದಾರೆ.

ಇದಾದ ಬಳಿಕ ಬಾಲಕಿ ರಾತ್ರಿ ವೇಳೆ ಹೊಟ್ಟೆ ನೋವು ಎಂದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರಿಶೀಲಿಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಉಳ್ಳಾಲ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!