ವಿಜಯಪುರ: ರಥೋತ್ಸವದ ವೇಳೆ ಆಯತಪ್ಪಿ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ನಡೆದಿದೆ. ಗೋಲಗೇರಿಯ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ಅವಘಡ ಸಂಭವಿಸಿದೆ.
ಗೋಲಗೇರಿ ನಿವಾಸಿ ಮುದುಕಣ್ಣ ಕಾಚಾಪುರ (50) ಮೃತ ದುರ್ದೈವಿ. ಈತ ಮೇಲಿನಿಂದ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ರಥದ ಬಳಿ ನಿಂತಿದ್ದ ಮತ್ತೋರ್ವನಿಗೆ ಗಾಯವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆಗೆ ಒಳಪಡಿಸಲಾಗಿದೆ.
ಮೃತ ಮುದುಕಣ್ಣ ಕಾಚಾಪುರ ಸುಮಾರು 70 ಅಡಿ ಎತ್ತರದ ರಥದ ಮೇಲೇರಿ ಕಳಸ ಕಟ್ಟುತ್ತಿದ್ದರು. ಈ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.