ಕೋಲ್ಕತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿಶಿಷ್ಟ ರೀತಿಯಲ್ಲಿ ಬಿಜೆಪಿಯ ಕುರಿತು ವ್ಯಂಗ್ಯವಾಡಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರಿಗಳಿಗೆ ಕ್ಲೀನ್ ಚಿಟ್ ಸಿಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ ಮೋದಿ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ
ಕೋಲ್ಕತ್ತಾದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಳೆದೆರಡು ದಿನದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇಲ್ಲಿಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿ ಹೆಸರಿನ ವಾಷಿಂಗ್ ಮಷೀನ್ ತರಿಸಿ ಒಂದು ಡೆಮೋ ಕೊಟ್ಟಿದ್ದಾರೆ.
ಕಪ್ಪು ಬಟ್ಟೆಯನ್ನು ಬಿಜೆಪಿ ವಾಷಿಂಗ್ ಮಷೀನ್ ಒಳಗೆ ಹಾಕಿ ಕ್ಷಣಾರ್ಧದಲ್ಲಿ ಬಿಳಿ ಬಟ್ಟೆಯನ್ನು ಹೊರತೆಗೆಯುವ ದೀದಿ.. ನೋಡಿ ಸೇಮ್ ಇದೇ ಥರ.. ಭ್ರಷ್ಟಾಚಾರಿಗಳು ಬಿಜೆಪಿ ಪಾರ್ಟಿ ಸೇರಿದ ತಕ್ಷಣ ಪರಿಶುದ್ಧರಾಗಿ ಎಲ್ಲಾ ಭ್ರಷ್ಟಾಚಾರ ಆರೋಪಗಳಿಂದ ಮುಕ್ತವಾಗಿಬಿಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಲಂಚ ಪ್ರಕರಣ, ಅತ್ಯಾಚಾರ, ಗಲಭೆ, ದಾಂಧಲೆ, ಕೊಲೆ ಆರೋಪಗಳಿದ್ದರೂ ಸಹ ಬಿಜೆಪಿ ಅಂಥವರನ್ನು ರಕ್ಷಿಸಲು ರಕ್ಷಿಸುತ್ತೆ ಎಂದು ಈ ಡೆಮೋ ಮೂಲಕ ಕುಹಕವಾಡಿದ್ದಾರೆ. ದೀದಿಯ ಈ ವಿನೂತನ ಡೆಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ