ಕೊಲ್ಕತ್ತಾ: ರಾಮ ನವಮಿ ಆಚರಣೆ ದಿನವೇ ಪಶ್ಚಿಮ ಬಂಗಾಳದ ಹೌರಾದಲ್ಲಿ ಸಂಭವಿಸಿದ ಕೋಮು ಹಿಂಸಾಚಾರಕ್ಕೆ ಯಾರು ಹೊಣೆ ಎನ್ನುವ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ವಿಡಿಯೊಗಳನ್ನು ಬಿಡುಗಡೆ ಮಾಡಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎರಡೂ ಗುಂಪುಗಳ ಹಿಂಸಾಚಾರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ ನಡೆದಿದ್ದು, ಅಂಗಡಿಗಳಿಗೆ ಹಾನಿಯಾಗಿವೆ.
ದುಷ್ಕರ್ಮಿಗಳ ಗುಂಪು ಅಂಗಡಿಗಳ ಮೇಲೆ ದಾಳಿ ನಡೆಸುತ್ತಿರುವ ಮತ್ತು ಆರ್ ಎಎಫ್ ಹಾಗು ಪೊಲೀಸರಿಗೆ ಕಲ್ಲುತೂರಾಟ ನಡೆಸುತ್ತಿರುವ ವಿಡಿಯೊಗಳನ್ನು ಬಿಜೆಪಿ ಶೇರ್ ಮಾಡಿದೆ.
ಇನ್ನು ರಾಮನವಮಿ ಮೆರವಣಿಗೆಯಲ್ಲಿ ಗನ್ ಹಿಡಿದಿರುವ ವಿಡಿಯೊವನ್ನು ಶೇರ್, “ಒಂದು ಸಮುದಾಯವನ್ನು ಗುರಿ ಮಾಡುವ ಮತ್ತು ಬೆದರಿಸುವ ದಾರಿ” ಎಂದಿದೆ.
ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ಮತ್ತು ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಅವರಿಗೆ ಕರೆ ಮಾಡಿದ್ದಾರೆ.