ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಒಂದು ಗ್ಯಾರೆಂಟಿ ಯೋಜನೆ ಕೈಬಿಡುತ್ತೇವೆ ಅಂತಾ ಹೇಳಿದ್ದೀರಿ ಯಾಕೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸುದ್ದಿಗೋಷ್ಠಿಯಲ್ಲೇ ಪ್ರಶ್ನಿಸಿದ ಪ್ರಸಂಗ ನಡೆದಿದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಇಂದಿರಾ ಗಾಂಧಿ ಪುಣ್ಯಸ್ಮರಣೆ ದಿನಾಚರಣೆ ಕಾರ್ಯಕ್ರಮದ ನಂತರದ ಪತ್ರಿಕಾಗೋಷ್ಠಿಯಲ್ಲೇ ಖರ್ಗೆ ಈ ಪ್ರಶ್ನೆ ಮಾಡಿದಾಗ..ಇಲ್ಲ ಇಲ್ಲ… ಶಕ್ತಿ ಯೋಜನೆ ಬಗ್ಗೆ ಪರಿಷ್ಕರಣೆ ಬಗ್ಗೆ ಮಾತ್ರ ಮಾತನಾಡಿದ್ವಿ ಅಂತಾ ಸಿಎಂ, ಡಿಸಿಎಂ ಒಟ್ಟಿಗೆ ಸೇರಿ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದರು… ಇಲ್ಲಪ್ಪಾ..ನೀವ್ ಪೇಪರ್ ಓದಲ್ಲ… ಪೇರಪ್ನಲ್ಲಿ ಬಂದಿರುವುದನ್ನೇ ನಾನು ಕೇಳಿದ್ದೀನಿ ಎಂದು ಕಿವಿ ಹಿಂಡಿದರು.
ಕರ್ನಾಟಕದ ರಾಜಕಾರಣಿಗಳೇ ಬುದ್ದಿವಂತರು.. ಇಲ್ಲಿನ ಪಂಚ ಗ್ಯಾರೆಂಟಿ ಯೋಜನೆಗಳ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ಘೋಷಣೆ ಮಾಡಿದ್ದೇವೆ. ಬಜೆಟ್ಗೆ ಅನುಗುಣವಾಗಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಿ ಎಂದು ಖರ್ಗೆ ಅವರು ಇದೇ ವೇಳೆ ಸಿಎಂ, ಡಿಸಿಎಂಗೆ ಸಲಹೆ ನೀಡಿದರು.