Friday, December 5, 2025
Homeಟಾಪ್ ನ್ಯೂಸ್Snacks Recipe: ಈರುಳ್ಳಿ ಪಕೋಡಾಗಿಂತ ಟೇಸ್ಟಿ ಈ ಬ್ರೊಕಲಿ ಪಕೋಡ; ಇಲ್ಲಿದೆ ರೆಸಿಪಿ

Snacks Recipe: ಈರುಳ್ಳಿ ಪಕೋಡಾಗಿಂತ ಟೇಸ್ಟಿ ಈ ಬ್ರೊಕಲಿ ಪಕೋಡ; ಇಲ್ಲಿದೆ ರೆಸಿಪಿ

ನೇಕರಿಗೆ ಸಂಜೆಯ ಕಾಫಿ ಟೀ ಸಮಯದಲ್ಲಿ ಏನಾದರೂ ರುಚಿಕರವಾದದ್ದು ತಿನ್ನಲು ಇರಲೇಬೇಕು. ಅದಕ್ಕಾಗಿ ಹೆಚ್ಚಿನವರು ಮನೆಯಲ್ಲಿ ಪಕೋಡಾ, ಬೋಂಡಾ, ಬಜ್ಜಿ ಹೀಗೆ ಹಲವು ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ನೀವು ಸಂಜೆಯ ತಿಂಡಿಗೆ ಆರೋಗ್ಯಕರ ರೆಸಿಪಿಯನ್ನು ಹುಡುಕುತಿದ್ದರೆ ಒಮ್ಮೆ ಬ್ರೊಕಲಿ ಪಕೋಡವನ್ನು ಮಾಡಿ ನೋಡಿ. ಸಾಮಾನ್ಯವಾಗಿ ಬ್ರೊಕಲಿಯಿಂದ ಬಿರಿಯಾನಿ, ಪಲಾವ್ ಮಾತ್ರವಲ್ಲದೆ ಪಕೋಡ ಕೂಡ ಮಾಡಬಹುದು. ಇದು ತಿನ್ನಲು ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ತಯಾರಿಸಬಹುದಾದ ಬ್ರೊಕಲಿ ಪಾಕವಿಧಾನದ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಬ್ರೊಕಲಿ

ಬೆಳ್ಳುಳ್ಳಿ

ಮೊಟ್ಟೆ

ಕಡಲೆ ಹಿಟ್ಟು

ತುರಿದ ಚೀಸ್

ಉಪ್ಪು

ಮೆಣಸಿನ ಪುಡಿ

ಮಾಡುವ ವಿಧಾನ

* ಮೊದಲಿಗೆ ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ.

* ಬ್ರೊಕಲಿಯನ್ನು ಸುಮಾರು 5 ನಿಮಿಷಗಳ ಕಾಲ ನೀರಿನಲ್ಲಿ ಬೇಯಿಸಿಕೊಳ್ಳಿ.

* ನಂತರ ನೀರಿನಿಂದ ಬ್ರೊಕಲಿಯನ್ನು ಬೇರ್ಪಡಿಸಿ, ತಣ್ಣಗಾಗಲು ಬಿಡಿ. ನಂತರ ಅದನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ.

* ಈಗ ಒಂದು ಬೌಲ್‌ನಲ್ಲಿ ಬ್ರೊಕಲಿ, ಬೆಳ್ಳುಳ್ಳಿ, ಮೊಟ್ಟೆ, ಬಾದಾಮಿ ಹಿಟ್ಟು, ತುರಿದ ಚೀಸ್, ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

* ಈಗ ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಪ್ಯಾಟಿ ಅಥವಾ ಪಕೋಡಾ ಗಾತ್ರದಲ್ಲಿ ತಟ್ಟಿಕೊಳ್ಳಿ.

* ಅವುಗಳನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ, ಸುಮಾರು 30 ನಿಮಿಷ ಬೇಯಿಸಿಕೊಳ್ಳಿ. ನಡುವೆ ಒಂದು ಬಾರಿ ತಿರುವಿ ಹಾಕಿ ಬೇಯಿಸಿ.

* ನಂತರ ಪಕೋಡಾಗಳನ್ನು ಓವನ್‌ನಿಂದ ತೆಗೆದು 5 ನಿಮಿಷ ಸ್ವಲ್ಪ ತಣ್ಣಗಾಗಲು ಬಿಡಿ.

* ಇದೀಗ ಚೀಸೀ ಬ್ರೊಕಲಿ ಪಕೋಡಾ ಸವಿಯಲು ಸಿದ್ಧವಾಗಿದೆ. ಇದನ್ನು ತಣ್ಣಗಾಗಿಸಿಯೂ ಸವಿಯಬಹುದು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!