Wednesday, December 4, 2024
Homeಟಾಪ್ ನ್ಯೂಸ್WAQF BOARD:‌ ಹೊಸ ಸರ್ಕಾರ ರಚನೆಗೂ ಮುನ್ನವೇ ವಕ್ಫ್ ಮಂಡಳಿಗೆ 10 ಕೋಟಿ ನೀಡುವ ಆದೇಶ...

WAQF BOARD:‌ ಹೊಸ ಸರ್ಕಾರ ರಚನೆಗೂ ಮುನ್ನವೇ ವಕ್ಫ್ ಮಂಡಳಿಗೆ 10 ಕೋಟಿ ನೀಡುವ ಆದೇಶ ವಾಪಸ್..!

ಮುಂಬೈ: ವಿವಾದದ ಬೆನ್ನಲ್ಲೇ ವಕ್ಫ್ ಮಂಡಳಿಗೆ 10 ಕೋಟಿ ನೀಡಬೇಕೆಂಬ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಹಿಂಪಡೆದಿದೆ.

ಮಹಾರಾಷ್ಟ್ರ ಸರ್ಕಾರವು ವಕ್ಫ್ ಮಂಡಳಿಯನ್ನು ಬಲಪಡಿಸಲು 10 ಕೋಟಿ ರೂಪಾಯಿಗಳನ್ನು ವಿತರಿಸಲು ಆದೇಶಿಸಿತ್ತು. ಆದರೆ ಹೊಸ ಸರ್ಕಾರ ರಚನೆಗೂ ಮುನ್ನವೇ ಈ ಆದೇಶವನ್ನು ಹಿಂಪಡೆಯಲಾಗಿದೆ.

ಈ ಕುರಿತು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಮಾಹಿತಿ ನೀಡಿದ್ದಾರೆ. ಸರ್ಕಾರದ ನಿರ್ಣಯ (ಜಿಆರ್) ಹೊರಡಿಸಿದ ಒಂದು ದಿನದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಸ್ತಾವನೆಯ ಪ್ರಕಾರ, 2024-25ನೇ ಸಾಲಿನಲ್ಲಿ ವಕ್ಸ್ ಮಂಡಳಿಗೆ 20 ಕೋಟಿ ನೀಡುವುದಾಗಿ ಗುರುವಾರ ನಿರ್ಧರಿಸಲಾಗಿತ್ತು. ಈ ಬಗ್ಗೆ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು. ಆದರೆ ಇಂದು ಈ ನಿರ್ಧಾರದಿಂದ ಹಿಂದೆ ಸರಿದಿದೆ. ವಕ್ಸ್ ಮಂಡಳಿಗೆ ಈಗಾಗಲೇ 2 ಕೋಟಿ ಹಣ ಬಿಡುಗಡೆಯಾಗಿತ್ತು.

ಹೆಚ್ಚಿನ ಸುದ್ದಿ

error: Content is protected !!