ಮಹಾರಾಷ್ಟ್ರ : ಇಲ್ಲಿನ (Maharashtra) ಸಿಎಂ (CM) ದೇವೇಂದ್ರ ಫಡ್ನವೀಸ್ (Devendra Fadnavis) ಅವರ ಪತ್ನಿ, ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಬ್ಯಾಂಕರ್ ಆಗಿರುವ ಅಮೃತಾ ಫಡ್ನವೀಸ್ (Amrutha Fadnavis) ಅವರು ಈ ಬಾರಿಯ ಪ್ರತಿಷ್ಠಿತ ‘ಕಾನ್ ಚಲನಚಿತ್ರೋತ್ಸವ’ದಲ್ಲಿ (Cannes festival) ಭಾಗವಹಿಸುತ್ತಿಲ್ಲ ಎಂದು ಪ್ರಕಟಿಸಿದ್ದಾರೆ. ಜಾಗತಿಕ ಮಟ್ಟದ ಈ ಸಿನಿಮಾ ಹಬ್ಬದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಮತ್ತು ಮಹಾರಾಷ್ಟ್ರದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಅವರಿಗೆ ಅಧಿಕೃತ ಆಮಂತ್ರಣ ಸಿಕ್ಕಿತ್ತು. ಆದಾಗ್ಯೂ, ಅವರು ಈ ಗೌರವಾನ್ವಿತ ಅವಕಾಶವನ್ನು ಪ್ರೀತಿಯಿಂದಲೇ ನಿರಾಕರಿಸಿದ್ದಾರೆ.
ಇನ್ನು ತಮ್ಮ ಬ್ಯಾಂಕಿಂಗ್ ವೃತ್ತಿಜೀವನ ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಅವರು ಈ ನಿರ್ಧಾರ ಕೈಗೊಂಡಿಲ್ಲ. ಬದಲಿಗೆ ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟು ಇಂಧನ ಮಿತ ಬಳಕೆಯ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
My first step towards the austerity measures envisioned by Hon’ble PM Narendra Modi ji: putting nation first.
I was honoured with an invitation to represent Maharashtra, its culture and our glorious handloom heritage at the prestigious Cannes Film Festival. A magnificent Paithani… pic.twitter.com/MogGE2pilD— AMRUTA FADNAVIS (@fadnavis_amruta) May 16, 2026
ಸಾಂಸ್ಕೃತಿಕ ರಾಯಭಾರಿಯಾಗಿ ದೇಶವನ್ನು ಪ್ರತಿನಿಧಿಸುವ ಇಂತಹ ಸುವರ್ಣಾವಕಾಶ ಸಿಕ್ಕರೂ, ಅಮೃತಾ ಅವರು ಅದೆಲ್ಲವನ್ನೂ ಮೀರಿ ಈ ಧೃಢ ನಿರ್ಧಾರ ಕೈಗೊಂಡಿದ್ದಾರೆ. ಜಾಗತಿಕ ಗ್ಲಾಮರ್ ಜಗತ್ತಿಗಿಂತ ದೇಶದ ಹಿತವೇ ಮುಖ್ಯ ಎಂದು ಸಾಬೀತುಪಡಿಸಿದ ಅವರ ಈ ನಡೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.