Friday, March 21, 2025
Homeಟಾಪ್ ನ್ಯೂಸ್ಮಾಡಾಳು ವಿರೂಪಾಕ್ಷಪ್ಪಗೆ 5 ದಿನ ಲೋಕಾಯುಕ್ತ ಪೊಲೀಸ್ ಕಸ್ಟಡಿ

ಮಾಡಾಳು ವಿರೂಪಾಕ್ಷಪ್ಪಗೆ 5 ದಿನ ಲೋಕಾಯುಕ್ತ ಪೊಲೀಸ್ ಕಸ್ಟಡಿ

ಬೆಂಗಳೂರು: ಚನ್ನಗಿರಿಯ ಬಿಜೆಪಿ ಶಾಸಕ, ಮಾಡಾಳು ವಿರೂಪಾಕ್ಷಪ್ಪರನ್ನು 5 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಲೋಕಾಯುಕ್ತ ಪೊಲೀಸರು ಮಾಡಾಳು ವಿರೂಪಾಕ್ಷಪ್ಪರನ್ನು ಬೆಂಗಳೂರನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶ ಬಿ. ಜಯಂತ್ ಕುಮಾರ್‌ ಶಾಸಕ ವಿರೂಪಾಕ್ಷಪ್ಪರನ್ನು ಏಪ್ರಿಲ್ 1ರ ತನಕ ಲೋಕಾಯುಕ್ತ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಟೆಂಡರ್‌ಗೆ 40 ಲಕ್ಷ ರೂ. ಲಂಚ ಪಡೆಯುವಾಗ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಬೆಂಗಳೂರಿನಲ್ಲಿರುವ ಶಾಸಕರ ಖಾಸಗಿ ಕಚೇರಿಯಲ್ಲಿ ಲೋಕಾಯಕ್ತರ ಕೈಗೆ ಸಿಕ್ಕಿಬಿದ್ದರು.

ಈ ಪ್ರಕರಣದ ಎ-1 ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಮಾರ್ಚ್‌ 7ರಂದು ನಿರೀಕ್ಷಣಾ ಜಾಮೀನು ನೀಡಿತ್ತು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಲೋಕಾಯುಕ್ತ ಪೊಲೀಸರು ಜಾಮೀನು ರದ್ದುಗೊಳಿಸಲು ಮನವಿ ಮಾಡಿದ್ದರು. ನಿರೀಕ್ಷಣಾ ಜಾಮೀನು ರದ್ದಾದ ಬಳಿಕ ಸೋಮವಾರ ವಿರೂಪಾಕ್ಷಪ್ಪರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಮಂಗಳವಾರ ಕೋರ್ಟ್‌ಗೆ ಹಾಜರು ಪಡಿಸಿ ೧೦ ದಿನಗಳ ಕಾಲ ಸ್ಟಡಿಗೆ ಕೇಳಿದ್ರು. ಅನಾರೋಗ್ಯದ ಕಾರಣ ಜಾಮೀನು ನೀಡಬೇಕೆಂದು ವಿರೂಪಕ್ಷಪ್ಪ ಪರ ವಕೀಲರು ಮನವಿ ಮಾಡಿದರಾರೂ ಕೋರ್ಟ್‌ ಆರೋಪಿಯನ್ನು 5 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

ಹೆಚ್ಚಿನ ಸುದ್ದಿ

error: Content is protected !!