ನವದೆಹಲಿ: ಲೆಜೆಂಡರಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿಕೆಟ್ ಕೀಪರ್, ಬ್ಯಾಟರ್ ಖ್ಯಾತಿಯ ಎಂಎಸ್ ಧೋನಿ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಸೀಸನ್‌ಗೆ ಮರಳಲಿದ್ದಾರೆ ಎಂದು ಸಿಎಸ್‌ಕೆ ಗುರುವಾರ ಘೋಷಿಸಿದೆ.
ಈ ವರ್ಷದ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ಸಿಎಸ್‌ಕೆ ಮಾಜಿ ನಾಯಕ ಧೋನಿ ಅವರನ್ನು ಕೇವಲ 4 ಕೋಟಿ ರೂ.ಗೆ ಅನ್ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಂಡಿದೆ. 2022ರಲ್ಲಿ ಧೋನಿಯನ್ನು ಸಿಎಸ್‌ಕೆ ತನ್ನ ಎರಡನೇ ಆಟಗಾರನಾಗಿ 12 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಐದು ಬಾರಿ ತಂಡಕ್ಕೆ ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟ ಧೋನಿ ಕಳೆದ ಸೀಸನ್‌ಗೂ ಮೊದಲು ನಾಯಕತ್ವದಿಂದ ಕೆಳಗಿಳಿದು ತಮ್ಮ ಸ್ಥಾನವನ್ನು ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದರು.
ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಆಡುತ್ತಾರೋ ಇಲ್ಲವೋ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿತ್ತು. ಈ ಬಗ್ಗೆ ಭಾರೀ ಚರ್ಚೆಯ ಬಳಿಕ ಇದೀಗ ಮತ್ತೊಂದು ಸೀಸನ್ ಆಡಲು ಧೋನಿ ಮರಳಿದ್ದಾರೆ.