Thursday, April 16, 2026
Homeಟಾಪ್ ನ್ಯೂಸ್LPG CRISIS: ಬೆಂಗಳೂರಲ್ಲಿ ಇಂಡಕ್ಷನ್ ಸ್ಟೌವ್‌ಗೆ ಭಾರಿ ಬೇಡಿಕೆ, ಹುಬ್ಬಳ್ಳಿಯ ಹೋಟೆಲ್​​​​​​​​ಗಳಲ್ಲಿ ಕಟ್ಟಿಗೆ ಒಲೆ ಮೊರೆಹೋದ...

LPG CRISIS: ಬೆಂಗಳೂರಲ್ಲಿ ಇಂಡಕ್ಷನ್ ಸ್ಟೌವ್‌ಗೆ ಭಾರಿ ಬೇಡಿಕೆ, ಹುಬ್ಬಳ್ಳಿಯ ಹೋಟೆಲ್​​​​​​​​ಗಳಲ್ಲಿ ಕಟ್ಟಿಗೆ ಒಲೆ ಮೊರೆಹೋದ ಮಾಲೀಕರು

 ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ಕೆಲವೆಡೆ LPG ಪೂರೈಕೆಯಲ್ಲಿ (LPG Crisis) ವ್ಯತ್ಯಯ ಕಂಡುಬಂದಿದೆ. ಈ ಬೆನ್ನಲ್ಲೇ ಬೆಂಗಳೂರಿನ ಅಂಗಡಿಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳು ಭಾರೀ ಬೆಡಿಕೆಗೆ ಬಂದಿದ್ದು, ಸ್ಟಾಕ್‌ ಖಾಲಿಯಾಗಿದೆ. ಅತ್ತ ಹುಬ್ಬಳ್ಳಿಯ ಕೆಲ ಹೋಟೆಲ್​​​ಗಳಲ್ಲಿ ಈಗಾಗಲೇ ಕಟ್ಟಿಗೆ ಒಲೆಗಳ ಮೇಲೆ ಅಡುಗೆ ಮಾಡಲಾಗುತ್ತಿದೆ.

ಬೆಂಗಳೂರಿನಾದ್ಯಂತ ಗೃಹೋಪಯೋಗಿ ಉಪಕರಣಗಳ ಅಂಗಡಿಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಬೇಡಿಕೆ ಏರಿಕೆಯಾಗಿದ್ದು, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. LPG ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯದ ಸುದ್ದಿ ಹರಡುತ್ತಿದ್ದಂತೆ, ಗ್ರಾಹಕರು ಇಂಡಕ್ಷನ್ ಸ್ಟೌವ್‌ಗಳ ಬಗ್ಗೆ ವಿಚಾರಣೆ ನಡೆಸಲು ಹಾಗೂ ಖರೀದಿಸಲು ಮುಗಿಬಿದ್ದಿದ್ದಾರೆ. ಮಂಗಳವಾರದಿಂದ (ಮಾ.10) ಈ ಬೇಡಿಕೆ ಏರಿಕೆಯಾಗಿದ್ದು, ಕೇವಲ ಒಂದೇ ದಿನದಲ್ಲಿ ಅಂದರೆ ಬುಧವಾರದೊಳಗೆ (ಮಾ.11) ನಗರದ ಹಲವಾರು ಅಂಗಡಿಗಳಲ್ಲಿ ಸ್ಟಾಕ್‌ ಸಂಪೂರ್ಣ ಖಾಲಿಯಾಗಿದೆ.

ಜಯನಗರ, ಮಲ್ಲೇಶ್ವರಂ, ಚಿಕ್ಕಪೇಟೆ ಹಾಗೂ ಕೋರಮಂಗಲ ಸೇರಿದಂತೆ ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿದೆ. ಎಲ್ಲೆಡೆ ಇಂಡಕ್ಷನ್ ಸ್ಟೌವ್‌ಗಳ ಖರೀದಿ ಹೆಚ್ಚಾಗಿದ್ದು, ಬಹುತೇಕ ಅಂಗಡಿಗಳಲ್ಲಿ ಸ್ಟಾಕ್‌ ಖಾಲಿಯಾಗಿದೆ. ಜಯನಗರದ ಅಂಗಡಿಯೊಂದರಲ್ಲಿ ಒಂದೇ ದಿನದಲ್ಲಿ ಸುಮಾರು 350 ಇಂಡಕ್ಷನ್ ಸ್ಟೌವ್‌ಗಳು ಮಾರಾಟವಾಗಿದ್ದರೆ, ಮತ್ತೊಂದು ಅಂಗಡಿಯಲ್ಲಿ 75 ಸ್ಟೌವ್‌ಗಳು ಮಾರಾಟವಾಗಿವೆ.

ಮಲ್ಲೇಶ್ವರಂ ಪ್ರದೇಶದಲ್ಲಿಯೂ ಬಹುತೇಕ ಮಾದರಿಗಳು ಮಾರಾಟವಾಗಿ, ಕೇವಲ ಸುಮಾರು 1950 ರೂ. ಬೆಲೆಯ ಒಂದೇ ಒಂದು ಬ್ರ್ಯಾಂಡ್‌ನ ಸ್ಟೌವ್ ಮಾತ್ರ ಉಳಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಸಾವಿರಾರು ಗೃಹೋಪಯೋಗಿ ವಸ್ತುಗಳು ದೊರೆಯುವ ಚಿಕ್ಕಪೇಟೆ ಮಾರುಕಟ್ಟೆಯಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಬಹುತೇಕ ಎಲ್ಲಾ ಸ್ಟೌವ್‌ಗಳು ಮಾರಾಟವಾಗಿದ್ದು, ಕೆಲವೇ ಕೆಲವು ಮಾತ್ರ ಉಳಿದಿವೆ ಎಂದು ತಿಳಿದುಬಂದಿದೆ.

ಇಂಡಕ್ಷನ್ ಸ್ಟೌವ್‌ಗಳ ಖರೀದಿಗೆ ಸಂಬಂಧಿಸಿದಂತೆ ಗ್ರಾಹಕರ ವಿಚಾರಣೆಗಳಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ. ಕೋರಮಂಗಲದ ಗೃಹೋಪಯೋಗಿ ಮಳಿಗೆಗಳಲ್ಲಿ ಕೇವಲ ಎರಡು ದಿನಗಳಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಪಟ್ಟು ಹೆಚ್ಚು ಗ್ರಾಹಕರು ಇಂಡಕ್ಷನ್ ಸ್ಟೌವ್‌ಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ದೇಶದಾದ್ಯಂತ ಇಂಡಕ್ಷನ್ ಸ್ಟೌವ್ ಸ್ಟಾಕ್‌ ಖಾಲಿ!

ದೇಶದ ಕೆಲವು ಭಾಗಗಳಲ್ಲಿ ಎಲ್‌ಪಿಜಿ (LPG Crisis) ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಇಂಡಕ್ಷನ್ ಸ್ಟೌವ್‌ಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಕಾರಣದಿಂದ ಹಲವಾರು ನಗರಗಳಲ್ಲಿ ಇಂಡಕ್ಷನ್ ಕುಕ್‌ಟಾಪ್‌ಗಳು ಬೇಗನೆ ‘ಔಟ್ ಆಫ್ ಸ್ಟಾಕ್’ ಆಗುತ್ತಿದೆ.

ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಜನರು ಗ್ಯಾಸ್ ಕೊರತೆ ಉಂಟಾಗಬಹುದು ಎಂಬ ಆತಂಕದಿಂದ ಪರ್ಯಾಯವಾಗಿ ಇಂಡಕ್ಷನ್ ಸ್ಟೌವ್‌ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬೇಡಿಕೆ ಅತಿಯಾದ ಮಟ್ಟಕ್ಕೆ ಏರಿದೆ.
ವಿಶೇಷವಾಗಿ Blinkit, Swiggy Instamart ಮತ್ತು Zepto ಮುಂತಾದ ವೇದಿಕೆಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳು ‘ಸೋಲ್ಡ್ ಔಟ್’ ಅಥವಾ ‘ಅನಾವೈಲಬಲ್’ ಎಂದು ತೋರಿಸುತ್ತಿರುವುದಾಗಿ ವರದಿಯಾಗಿದೆ.

ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲೂ ಬೇಡಿಕೆ ಏರಿಕೆಯಾಗಿದೆ. ಕೆಲವು ಇ-ಕಾಮರ್ಸ್ ಕಂಪನಿಗಳ ಪ್ರಕಾರ ಕಳೆದ ಕೆಲ ದಿನಗಳಲ್ಲಿ ಇಂಡಕ್ಷನ್ ಕುಕ್‌ಟಾಪ್ ಮಾರಾಟ ಮೂರು ಪಟ್ಟು ಹೆಚ್ಚಾಗಿದೆ, ಕೆಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಬೇಡಿಕೆ 20 ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸತತ ದಾಳಿಯ ಬಳಿಕವೂ ಇರಾನ್ ಸರ್ಕಾರ ಕುಸಿಯುವ ಸಾಧ್ಯತೆಯಿಲ್ಲ – ಅಮೆರಿಕ ಗುಪ್ತಚರ ವರದಿ

ಹೆಚ್ಚಿನ ಸುದ್ದಿ

Change Language »
error: Content is protected !!