ಕೇರಳ : ಈ ದೇಶದ ಉತ್ತಮ ಭವಿಷ್ಯದ ನಾಯಕಿ ಪ್ರಿಯಾಂಕಾ ಗಾಂಧಿ ಆಗಲಿದ್ದು, ಅವರನ್ನು ಗೆಲ್ಲಿಸುವ ಸುವರ್ಣ ಅವಕಾಶ ವಯನಾಡಿನ ಹಾಗೂ ಕೇರಳದ ಜನತೆಗೆ ಸಿಕ್ಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಬ್ಬರದ ಪ್ರಚಾರ ಮಾಡಿದರು.
ರಾಹುಲ್ ಗಾಂಧಿ ಅವರಿಂದ ತೆರವಾದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ಪರ ತಿರುವಂಬಾಡಿ ವಿಧಾನಸಭಾ ಕ್ಷೇತ್ರದ ಮುಕ್ಕಾಂ ನಲ್ಲಿ ಇಂದು ಪ್ರಚಾರ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಶೋಷಿತರ-ಬಡವರ ಜನರ ಪರ ಪ್ರಬಲವಾದ ಮತ್ತೊಂದು ದನಿ ಸಂಸತ್ತಿನಲ್ಲಿ ಮೊಳಗ ಬೇಕಾದರೆ ಪ್ರಿಯಾಂಕಾ ಗಾಂಧಿ ಅವರನ್ನು ಆಯ್ಕೆ ಮಾಡಿ. ಈ ಅವಕಾಶವನ್ನು ದಯವಿಟ್ಟು ಕೈ ಚೆಲ್ಲಬೇಡಿ ಎಂದು ಮನವಿ ಮಾಡಿದರು. ಪ್ರಿಯಾಂಕಾ ಅವರು ತಮ್ಮ ಸಮಯ, ಪ್ರೀತಿ-ಚಿಂತನೆಯನ್ನು ಕೇರಳದ ಅಭಿವೃದ್ಧಿಗೆ ಮುಡುಪಾಗಿ ಇಟ್ಟಿದ್ದಾರೆ ಮುಂದೆಯೂ ಇಡಲಿದ್ದಾರೆ ಎಂದು ಡಿಕೆಶಿ ಒತ್ತಿ ಹೇಳಿದರು.