ಬೆಂಗಳೂರು : ಮಂಗಳವಾರ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ನಡೆಸಿ ಭ್ರಷ್ಟರ ಅಕ್ರಮ ಸಂಪತ್ತಿನ ಬಗ್ಗೆ ಮಹತ್ವದ ದಾಖಲೆ ಪರಿಶೀಲಿಸಿದೆ. ಈ ವೇಳೆ ಭ್ರಷ್ಟ ಕುಳಗಳು ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿರೋದು ಪತ್ತೆಯಾಗಿದೆ. ಒಟ್ಟು 37 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. 22.50 ಕೋಟಿ ರೂ. ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ.
ಯಾರ ಅಕ್ರಮ ಆಸ್ತಿ ಎಷ್ಟು..?
ದಾಳಿ ವೇಳೆ ಬೆಳಗಾವಿ ಜಿಲ್ಲೆಯ ಬೋರೆಗಾವ್ ಗ್ರಾಮ ಆಡಳಿತಾಧಿಕಾರಿ ,ವಿಟ್ಠಲ ಶಿವಪ್ಪ ಧವಳೇಶ್ವರ್ ಕೋಟಿ ಕೋಟಿ ಆಸ್ತಿ ಸಂಪಾದಿಸಿರೋದು ಗೊತ್ತಾಗಿದೆ. ಅವರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆದಿದೆ. 1 ವಾಸದ ಮನೆ, 4 ಎಕ್ರೆ ಕೃಷಿ ಜಮೀನು, 1,55,195 ರೂ. ನಗದು, 3,02,049 ರೂ. ಮೌಲ್ಯದ ಚಿನ್ನಾಭರಣ, 3,45,000 ರೂ. ಮೌಲ್ಯದ ವಾಹನಗಳು ಅವರ ಬಳಿ ಪತ್ತೆಯಾಗಿದೆ.
ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ವೆಂಕಟೇಶ್ ಮನೆ ಮೇಲೂ ದಾಳಿ ನಡೆಸಲಾಗಿದೆ. 2.21 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. 5 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 2 ವಾಸದ ಮನೆಗಳು, 1 ಗ್ಯಾಸ್ ಗೋಡೌನ್, 1 ಎಕ್ರೆ ಕೃಷಿ ಜಮೀನು, 1,42,000 ರೂ. ನಗದು, 39,31,900 ರೂ. ಮೌಲ್ಯದ ಚಿನ್ನಾಭರಣಗಳು, 17,70,000 ರೂ. ಮೌಲ್ಯದ ವಾಹನಗಳು ಇರೋದು ಪತ್ತೆಯಾಗಿದೆ.
ದಾವಣಗೆರೆಯ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಸಹಾಯಕ ನಿರ್ದೇಶಕ ಕಮಲ್ ರಾಜ್ ಬಳಿ 1.99 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. 4 ಸ್ಥಳಗಳಲ್ಲಿ ಶೋಧ ನಡೆದಿದ್ದು. 6 ನಿವೇಶನಗಳು, 2 ವಾಸದ ಮನೆಗಳು, 1 ಎಕ್ರೆ ಕೃಷಿ ಜಮೀನು, 1,15,000 ರೂ. ನಗದು, 15,79,000 ರೂ. ಮೌಲ್ಯದ ಚಿನ್ನಾಭರಣಗಳು, 32.30 ಲಕ್ಷ ರೂ. ಮೌಲ್ಯದ ವಾಹನಗಳು, 18 ಲಕ್ಷ ರೂ. ಬೆಲೆಬಾಳುವ ಇತರ ವಸ್ತುಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು, ಮೈಸೂರು ಸಿಟಿ ಕಾರ್ಪೊರೇಷನ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗೇಶ್ ಡಿ ಬಳಿ 2.72 ಕೋಟಿ ರೂ. ಮೌಲ್ಯದ ಆಸ್ತಿ ಇರೋದು ಗೊತ್ತಾಗಿದೆ.
5 ಸ್ಥಳಗಳಲ್ಲಿ ಶೋಧ ನಡೆದಿದ್ದು, 2 ನಿವೇಶನಗಳು, 1 ವಾಸದ ಮನೆ, 98, ಸಾವಿರ ರೂ. ನಗದು, 29,25,360 ರೂ. ಮೌಲ್ಯದ ಚಿನ್ನಾಭರಣಗಳು, 13,61,901 ರೂ. ಮೌಲ್ಯದ ವಾಹನಗಳು, 33,89,455 ರೂ. ಮೌಲ್ಯದ ಇತರ ವಸ್ತುಗಳು ಪತ್ತೆಯಾಗಿದೆ.
ಧಾರವಾಡದ ಕೆಐಎಡಿಬಿ ಅಧಿಕಾರಿ ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ ಬಳಿ 2.79 ಕೋಟಿ ರೂ ಅಕ್ರಮ ಆಸ್ತಿ ಇದೆ ಎಂದು ಲೋಕಾಯುಕ್ತ ದಾಳಿ ವೇಳೆ ಗೊತ್ತಾಗಿದೆ. ಇವರಿಗೆ ಸೇರಿದ
7 ಸ್ಥಳಗಳಲ್ಲಿ ಶೋಧ ನಡೆದಿದೆ. 3 ನಿವೇಶನಗಳು, 1 ವಾಸದ ಮನೆ, 7. 26 ಎಕ್ರೆ ಕೃಷಿ ಜಮೀನು. 41.11 ಲಕ್ಷ ರೂ. ನಗದು, 27,11,300 ರೂ. ಮೌಲ್ಯದ ಚಿನ್ನಾಭರಣಗಳು, 20 ಲಕ್ಷ ರೂ. ಮೌಲ್ಯದ ವಾಹನಗಳು, 6 ಲಕ್ಷ ರೂ. ಮೌಲ್ಯದ ಇತರ ವಸ್ತುಗಳು ಬಗ್ಗೆ ಲೋಕಾಯುಕ್ತ ಪೊಲೀಸರು ಪ್ರಶ್ನೆ ಮಾಡಿದ್ದಾರೆ.