Wednesday, November 13, 2024
Homeಕ್ರೀಡೆIPL: ಕನ್ನಡ, ಹಿಂದಿ ಸೇರಿ 12 ಭಾ‌ಷೆಯಲ್ಲಿ ಕೇಳಿ ಕಾಮೆಂಟ್ರಿ

IPL: ಕನ್ನಡ, ಹಿಂದಿ ಸೇರಿ 12 ಭಾ‌ಷೆಯಲ್ಲಿ ಕೇಳಿ ಕಾಮೆಂಟ್ರಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮುಂದಿನ 5 ವರ್ಷದ ಡಿಜಿಟಲ್ ಪ್ರಸಾರದ (ಆನ್‌ಲೈನ್‌ ಸ್ಟ್ರೀಮಿಂಗ್‌) ಹಕ್ಕನ್ನು ಪಡೆದುಕೊಂಡಿರುವ ಜಿಯೋ ಸಿನಿಮಾ, ಈ ಬಾರಿಯ ಟೂರ್ನಿಗಾಗಿ ಕನ್ನಡ, ಹಿಂದಿ, ಇಂಗ್ಲಿ‌ಷ್, ಮರಾಠಿ, ತಮಿಳು, ತೆಲುಗು ಸೇರಿದಂತೆ 12 ಭಾಷೆಗಳಲ್ಲಿ ವೀಕ್ಷಕ ವಿವರಣೆಗಾರರ ತಂಡವನ್ನು ಪ್ರಕಟಿಸಿದೆ.

ಐಪಿಎಲ್‌ನಲ್ಲಿ ಜಿಯೊ ಸಿನಿಮಾದ ಎಕ್ಸ್‌ಪರ್ಟ್‌ ಪ್ಯಾನಲ್‌ನಲ್ಲಿ ಖ್ಯಾತ ಕನ್ನಡಿಗರು ಸೇರಿದಂತೆ ಹಲವು ಮಾಜಿ ಸೂಪರ್‌ ಸ್ಟಾರ್‌ ಕ್ರಿಕೆಟಿಗರ ದಂಡೇ ಇರಲಿದೆ.  ಕನ್ನಡದ ವೀಕ್ಷಕ ವಿವರಣೆಗಾರರಾಗಿ ಕರ್ನಾಟಕದ ಮಾಜಿ ಕ್ರಿಕೆಟ್ ತಾರೆಯರಾದ ವೆಂಕಟೇಶ್ ಪ್ರಸಾದ್, ದೀಪಕ್ ಚೌಗಲೆ, ಅಮಿತ್ ವರ್ಮ, ಎಸ್. ಅರವಿಂದ್, ಎಚ್. ಶರತ್, ಸುಜಯ್ ಶಾಸ್ತ್ರಿ, ರಾಘವೇಂದ್ರ ರಾಜ್, ಸುಮಂತ್ ಭಟ್ ಹಾಗೂ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ, ನಿರೂಪಕಿ ರೀನಾ ಡಿಸೋಜಾ, ನಟಿ-ಹಿತಾ ಚಂದ್ರಶೇಖರ್ ಮತ್ತು ಅಂಕಿತಾ ಅಮರ್ ಕಾಣಿಸಿಕೊಳ್ಳಲಿದ್ದಾರೆ.

ಉಳಿದಂತೆ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಕ್ರಿಸ್ ಗೇಲ್, ಎ.ಬಿ. ಡಿ ವಿಲಿಯರ್ಸ್, ಆರ್‌.ಪಿ. ಸಿಂಗ್, ಇಯಾನ್‌ ಮಾರ್ಗನ್ ಮತ್ತು ಸ್ಕಾಟ್ ಸ್ಟೈರಿಸ್ ಜಿಯೋ ಸಿನಿಮಾದ ವೀಕ್ಷಕ ವಿವರಣೆ ತಂಡದಲ್ಲಿರುವ ಪ್ರಮುಖರು. ಉಳಿದಂತೆ ಜಹೀರ್ ಖಾನ್, ಬ್ರೆಟ್ ಲೀ, ಗ್ರೇಮ್ ಸ್ವಾನ್, ಗ್ರೇಮ್ ಸ್ಮಿತ್ ಮೊದಲಾದವರು ಎಕ್ಸ್‌ಟ್ರಾ ಪ್ಯಾನಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!