Sunday, November 10, 2024
Homeಟಾಪ್ ನ್ಯೂಸ್ವೋಟರ್ ಐಡಿ ಆಧಾರ್ ಜೋಡಣೆ ಪ್ರಕ್ರಿಯೆ ಪ್ರಾರಂಭವಾಗಿಲ್ಲ: ಕಿರಣ್ ರಿಜುಜು

ವೋಟರ್ ಐಡಿ ಆಧಾರ್ ಜೋಡಣೆ ಪ್ರಕ್ರಿಯೆ ಪ್ರಾರಂಭವಾಗಿಲ್ಲ: ಕಿರಣ್ ರಿಜುಜು

ನವದೆಹಲಿ: ಮತದಾರರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯ ಇನ್ನೂ ಆರಂಭವಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರಾರಂಭಿಸಬೇಕಾಗಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ಗುರುವಾರ ತಿಳಿಸಿದರು.

ಮತದಾರರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ನಿರಂತರ ಕಾರ್ಯಕ್ರಮವಾಗಿದ್ದು, ಈ ಜೋಡಣೆಗೆ ಯಾವುದೇ ಕಾಲ ಮಿತಿ ಇರುವುದಿಲ್ಲ ಎಂದೂ ಹೇಳಿದರು.

ಒಂದು ವೇಳೆ ಮತದಾರರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆಯಾಗಿಲ್ಲ ಎಂದಾದರೆ ಅಂತಹವರೂ ಖಂಡಿತವಾಗಿ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದರು. ಈ ಬಗ್ಗೆ ಜನರು ಗೊಂದಲಗೊಳ್ಳೋದು ಬೇಡ ಎಂದಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಅಂದಾದರೆ ಚುನಾವಣಾ ನೋಂದಣಾಧಿಕಾರಿಗೆ ವ್ಯಕ್ತಿಯು ತನ್ನ ಗುರುತು ದೃಢೀಕರಣಕ್ಕೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಬಹುದು ಎನ್ನುವ ಅವಕಾಶವನ್ನು ಚುನಾವಣಾ ಕಾನೂನು (ತಿದ್ದುಪಡಿ) ಕಾಯ್ದೆ 2021ರಲ್ಲಿ ನೀಡಲಾಗಿದೆ. ಮತದಾರರ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಂಗ್ರಹಿಸುವ ಕಾರ್ಯಕ್ರಮವನ್ನು ಚುನಾವಣಾ ಆಯೋಗವು 2022ರ ಆಗಸ್ಟ್ 1ರಲ್ಲಿಯೇ ಪ್ರಾರಂಭಿಸಿದೆ ಎಂದರು.

ಹೆಚ್ಚಿನ ಸುದ್ದಿ

error: Content is protected !!