ಬೆಂಗಳೂರು: ಅಲ್ಪಸಂಖ್ಯಾತರಿಗೆ ಮೀಸಲಿದ್ದ 4% ಮೀಸಲಾತಿ ಕಸಿದು ಈಗ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಹಂಚಿಕೆ ಮಾಡುರುವುದನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರವಾಗಿ ಖಂಡಿಸಿದ್ರು.
ಬಿಜೆಪಿ ಅಂದ್ರೆ ಬಿಟ್ರೇಯಲ್ ಜನತಾ ಪಾರ್ಟಿ. ಬಿಜೆಪಿ ಅಂದ್ರೇನೇ ದ್ರೋಹ ಮಾಡುವ ಪಕ್ಷ. ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ತೆಗೆದುಕೊಂಡವರು ಸಂವಿಧಾನದ ಆಶಯಗಳನ್ನ ಕೊಲ್ಲುತ್ತಿದ್ದಾರೆ.. ಎಲ್ಲ ಸಮುದಾಯದವರಿಗೂ ದ್ರೋಹ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ರು.
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಕೇವಲ 90 ದಿನಗಳಲ್ಲಿ 3 ಬಾರಿ ಬದಲಾವಣೆ ಮಾಡಿದೆ. ಯಾವುದೇ ವರದಿ ಇಲ್ಲದೇ ತಮ್ಮ ಮನೆಯ ಆಸ್ತಿಯಂತೆ ಮೀಸಲಾತಿಯನ್ನ ಹಂಚಿದ್ದಾರೆ. ಯಾವ ಸಮುದಾಯದವರೂ ಭಿಕ್ಷುಕರಲ್ಲ. ಜನಸಂಖ್ಯೆ ಹಾಗೂ ಆ ಸಮುದಾಯದ ಪರಿಸ್ಥಿತಿ ಆಧರಿಸಿ ಜನ ಮೀಸಲಾತಿ ಕೇಳುತ್ತಾರೆ. ಅದು ಅವರ ಹಕ್ಕು ಕೂಡಾ. ಆದ್ರೆ ಆ ಹಕ್ಕನ್ನೇ ಬಿಜೆಪಿ ಕಸಿದುಕೊಂಡಿದೆ ಎಂದು ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ಹರಿಹಾಯ್ದರು.
ಅಲ್ಪ ಸಂಖ್ಯಾತರ ಮೀಸಲಾತಿ ಕಿತ್ತು ಬೇರೆಯವರಿಗೆ ಕೊಡು ಅಂತ ಯಾರು ಕೇಳಿದ್ರು..? 4-5 ಮಂದಿ ಸ್ವಾಮೀಜಿಗಳನ್ನು ಹೆದರಿಸಿ ಮೀಸಲಾತಿ ಹಂಚಿಕೆಯನ್ನು ಒಪ್ಪಿಸಿದ್ದೀರಿ.. ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಾ? ಅಲ್ಪ ಸಂಖ್ಯಾತರ ಮೀಸಲಾತಿ ಕಸಿದು ಒಕ್ಕಲಿಗರು ಲಿಂಗಾಯಿತರಿಗೆ ಕೊಡೋದರ ಮುಖಾಂತರ ಒಕ್ಕಲಿಗ,ಲಿಂಗಾಯತರು ಹಾಗೂ ಅಲ್ಪಸಂಖ್ಯಾತರ ಮಧ್ಯೆ ದ್ವೇಷ ಹುಟ್ಟುಹಾಕುವ ಕಾರ್ಯ ಬಿಜೆಪಿ ಮಾಡ್ತಿದೆ ಎಂದು ಆರೋಪಿಸಿದ್ರು.
ನಮಗೆ ಯಾರ ಮೇಲೂ ದ್ವೇಷ ಇಲ್ಲ.. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಆಗ ಬಿಜೆಪಿಯ ಈ ಮೀಸಲಾತಿಯನ್ನು ಕಿತ್ತೊಗೆಯೋದು ನಿಶ್ಚಿತ ಎಂದು ಡಿ.ಕೆ.ಶಿ ಹೇಳಿದ್ರು