Wednesday, December 4, 2024
Homeಟೆಕ್/ ಆಟೋ ಲೋಕEvening Snacks: ಆಲೂಗಡ್ಡೆ, ಬಾಳೆಕಾಯಿ ಬಿಟ್ಟಾಕಿ, ಸಿಹಿ ಗೆಣಸಿ​ನಲ್ಲಿ ಮಾಡಿ ಬಿಸಿಬಿಸಿಯಾದ ಬಜ್ಜಿ; ಸಂಜೆ ಟೈಂಗೆ...

Evening Snacks: ಆಲೂಗಡ್ಡೆ, ಬಾಳೆಕಾಯಿ ಬಿಟ್ಟಾಕಿ, ಸಿಹಿ ಗೆಣಸಿ​ನಲ್ಲಿ ಮಾಡಿ ಬಿಸಿಬಿಸಿಯಾದ ಬಜ್ಜಿ; ಸಂಜೆ ಟೈಂಗೆ ಇದೇ ಪರ್ಫೆಕ್ಟ್ ಸ್ನ್ಯಾಕ್ಸ್!

ಬಜ್ಜಿ ಅಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಸಂಜೆ ಟೈಂನಲ್ಲಿ ಬಜ್ಜಿ ತಿನ್ನುತ್ತಾ ಟೀ  ಅಥವಾ ಕಾಫಿ ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ಬಜ್ಜಿನಲ್ಲಿ ಬಾಳೆಕಾಯಿ, ಆಲೂಗಡ್ಡೆ , ಹೀರೇಕಾಯಿ, ಈರುಳ್ಳಿ ಬಜ್ಜಿ ಹೀಗೆ ನಾನಾ ತರಹದ ವೆರೈಟಿ ಬಜ್ಜಿಗಳನ್ನು ಟ್ರೈ ಮಾಡಿರುತ್ತೀರಿ. ಆದರೆ ಎಂದಾದರೂ ಸಿಹಿ ಗೆಣಸಿನ​ ಬಜ್ಜಿ ಮಾಡಿದ್ದೀರಾ? ಎಂದಾದರೂ ಬೇರೆ ರೀತಿಯಾದ ಬಜ್ಜಿ ಮಾಡಬೇಕು ಅಂತ ಯೋಚಿಸುತ್ತಿದ್ದರೆ ಸಿಹಿ ಗೆಣಸಿನ​ಲ್ಲಿ ಬಜ್ಜಿ ಮಾಡಿ ನೋಡಿ. ಇದರ ಟೇಸ್ಟ್ ಗೆ ನೀವು ಕಳೆದು ಹೋಗೋದು ಪಕ್ಕಾ. ಬಿಸಿಬಿಸಿಯಾದ ಸಿಹಿ ಗೆಣಸಿನ ಬಜ್ಜಿ ಮಕ್ಕಳಿಗಂತೂ ತುಂಬಾನೇ ಇಷ್ಟವಾಗುತ್ತದೆ. ಹಾಗಾದ್ರೆ ಸಿಹಿ ಗೆಣಸಿನ ಬಜ್ಜಿ ಹೇಗೆ ಮಾಡುವುದು ಅಂತ ನೋಡೋಣ.

ಬೇಕಾಗುವ ಸಾಮಾಗ್ರಿಗಳು

ಕಡಲೆಹಿಟ್ಟು – 1 ಕಪ್
ಸಿಹಿ ಗೆಣಸು
ಶುಂಠಿ ತುರಿ – ಕಾಲು ಟೀ ಸ್ಪೂನ್
ಹಸಿಮೆಣಸಿನಕಾಯಿ – 6
ಅಚ್ಚಖಾರದಪುಡಿ – ಅರ್ಧ ಟೀ ಸ್ಪೂನ್
ಚಾಟ್ ಮಸಾಲ – ಅರ್ಧ ಟೀ ಸ್ಪೂನ್
ಗರಂ ಮಸಾಲ – ಅರ್ಧ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿಣಪುಡಿ – ಚಿಟಿಕೆ
ಶುಂಠಿ -ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀ ಸ್ಪೂನ್
ಅಡುಗೆ ಸೋಡಾ – ಚಿಟಿಕೆ
ಜೀರಿಗೆ – ಒಂದೂವರೆ ಟೀ ಸ್ಪೂನ್
ಕೊತ್ತಂಬರಿಸೊಪ್ಪು – 1 ಕಪ್
ಪುದೀನಾ – 1 ಕಪ್
ಮೊಸರು – 2 ಟೀ ಸ್ಪೂನ್
ಎಣ್ಣೆ – ಕರಿಯಲು ಅಗತ್ಯವಿರುವಷ್ಟು

ಮಾಡುವ ವಿಧಾನ

ಮೊದಲಿಗೆ ಅಗಲವಾದ ಬೌಲ್ ತೆಗೆದುಕೊಂಡು 1 ಕಪ್ ಕಡಲೇಹಿಟ್ಟು, ಸಣ್ಣದಾಗಿ ಕಟೇ ಮಾಡಿರುವ ಕೊತ್ತಂಬರಿಸೊಪ್ಪು, ಕಾಲು ಟೀ ಸ್ಪೂನ್ ಶುಂಠಿ ತುರಿ, 3 ಸಣ್ಣದಾಗಿ ಕಟ್ ಮಾಡಿರುವ ಹಸಿಮೆಣಸಿನಕಾಯಿ, ಅರ್ಧ ಟೀ ಸ್ಪೂನ್ ಅಚ್ಚಖಾರದಪುಡಿ, ಅರ್ಧ ಟೀ ಸ್ಪೂನ್ ಚಾಟ್ ಮಸಾಲ, ಅರ್ಧ ಟೀ ಸ್ಪೂನ್ ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿಣಪುಡಿ, ಅರ್ಧ ಟೀ ಸ್ಪೂನ್ ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅಡುಗೆ ಸೋಡಾ, ಅರ್ಧ ಟೀ ಸ್ಪೂನ್ ಜೀರಿಗೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ನಂತರ ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಬೆರೆಸುತ್ತಾ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಬೇಕು. ಹಿಟ್ಟು ಉಂಡೆ ಕಟ್ಟದಂತೆ ಚೆನ್ನಾಗಿ ಬಜ್ಜಿ ಹಿಟ್ಟಿನ ಹದಕ್ಕೆ ಮಿಶ್ರಣ ರೆಡಿ ಮಾಡಿಕೊಳ್ಳಬೇಕು.

ಸ್ಟೌವ್ ಮೇಲೆ ಬಾಣಲಿ ಇಟ್ಟು ಕರಿಯಲು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಕಾಯಿಸಿಕೊಳ್ಳಿ. ಎಣ್ಣೆ ಕಾದ ಮೇಲೆಯೇ ಸಿಹಿ ಗೆಣಸು ಅನ್ನು ಕಡಲೇಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ ತೆಗೆಯಬೇಕು. (ಮೊದಲೇ ಕಡಲೇಹಿಟ್ಟಿನಲ್ಲಿ ಸಿಹಿ ಗೆಣಸು ಹಾಕಿದರೆ ಮೆತ್ತಗೆ ಆಗುತ್ತದೆ, ಸಿಹಿ ಗೆಣಸು ಬಜ್ಜಿ ಸರಿಯಾಗಿ ಬರುವುದಿಲ್ಲ). ಹಿಟ್ಟಲ್ಲಿ ಮುಳುಗಿಸಿದ ಸಿಹಿ ಗೆಣಸಿನ ಸ್ಲೈಡ್ ಅನ್ನು ಕಾದ ಎಣ್ಣೆಯಲ್ಲಿ ಎರಡೂ ಬದಿ ಫ್ರೈ ಮಾಡಿಕೊಳ್ಳಬೇಕು.

ಸಿಹಿ ಗೆಣಸಿನ ಸ್ಲೈಡ್ ಗಳು ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಫ್ರೈ ಮಾಡಿ ತೆಗೆಯಬೇಕು. ಇದನ್ನು ಸರ್ವಿಂಗ್ ಪ್ಲೇಟ್ ನಲ್ಲಿ ಹಸಿರು ಚಟ್ನಿ ಅಥವಾ ಸಾಸ್ ಜೊತೆ ಕೊಟ್ಟರೆ ಮಕ್ಕಳು ಒನ್ ಮೋರ್ ಅನ್ನದೆ ಇರಲ್ಲ. ಮನೆಮಂದಿಗೆಲ್ಲಾ ಸ್ಪೆಷಲ್ ಸಿಹಿ ಗೆಣಸಿನ ಬಜ್ಜಿ ಮಾಡಿಕೊಟ್ಟು ನೀವೂ ಸವಿಯಿರಿ.

ಹೆಚ್ಚಿನ ಸುದ್ದಿ

error: Content is protected !!