Tuesday, May 19, 2026
Homeವಿದೇಶಟ್ವಿಟರ್ ಬ್ಲು ಟಿಕ್‌ಗೆ ಸಂಬಂಧಿಸಿ ಆಘಾತಕಾರಿ ಮಾಹಿತಿ ಬಹಿರಂಗ!

ಟ್ವಿಟರ್ ಬ್ಲು ಟಿಕ್‌ಗೆ ಸಂಬಂಧಿಸಿ ಆಘಾತಕಾರಿ ಮಾಹಿತಿ ಬಹಿರಂಗ!

ಜಾಗತಿಕ ಉದ್ಯಮಿ ಎಲಾನ್ ಮಸ್ಕ್ ಖರೀದಿಸಿದ ನಂತರ ಟ್ವಿಟರ್ ಒಂದಿಲ್ಲೊಂದು ವಿವಾದಗಳಿಗೆ ತುತ್ತಾಗುತ್ತಿದ್ದು, ಇದೀಗ ಟ್ವಿಟರ್ ನ ಬ್ಲು ಟಿಕ್ ವೆರಿಫಿಕೇಶನ್ ಗೆ ಸಂಬಂಧಿಸಿ ಆಘಾತಕಾರಿ ಮಾಹಿತಿಯೊಂದು ಈಗ ಹೊರಬಿದ್ದಿದೆ.

ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ನಂತರ ಬ್ಲು ಟಿಕ್ ಮಾರ್ಕ್ ಗೆ ಹಣ ಪಾವತಿಸಬೇಕು ಎನ್ನುವ ನಿಯಮ ಜಾರಿಗೆ ತರಲಾಗಿತ್ತು. ಸದ್ಯ 4,44,435 ಬಳಕೆದಾರರು ಬ್ಲು ಟಿಕ್ ಗೆ ಚಂದಾದಾರರಾಗಿದ್ದಾರೆ.

ಆದರೆ ಇವರಲ್ಲಿ 2,20,132 ಬ್ಲು ಟಿಕ್ ಬಳಕೆದಾರರಿಗೆ ಇರುವ ಫಾಲೋವರ್ ಗಳ ಸಂಖ್ಯೆ 1000ಕ್ಕಿಂತಲೂ ಕಡಿಮೆ ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ.

ಇದಲ್ಲದೆ 2,270 ಬ್ಲು ಟಿಕ್ ಟ್ವಿಟರ್ ಖಾತೆಗಳಲ್ಲಿ ಒಬ್ಬರೇ ಒಬ್ಬ ಫಾಲೋವರ್ ಗಳಿಲ್ಲ ಎನ್ನುವುದನ್ನು Mashable ವರದಿ ಮಾಡಿತ್ತು.

ಜನವರಿಯಿಂದ ಟ್ವಿಟರ್ ಬ್ಲು ಸಬ್ ಸ್ಕ್ರಿಪ್ಶನ್ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕ ಟ್ರಾವಿಸ್ ಬ್ರೌನ್ ಅವರ ಪ್ರಕಾರ, 78,059 ಟ್ವಿಟರ್ ಬ್ಲು ಟಿಕ್ ಬಳಕೆದಾರರ ಖಾತೆಗೆ ಇರುವುದು 100ಕ್ಕಿಂತಲೂ ಕಡಿಮೆ ಫಾಲೋವರ್ ಗಳು. ಹೀಗಾಗಿ ಪ್ರತಿದಿನ ಟ್ವಿಟರ್ ಬಳಕೆ ಮಾಡುವ 254 ಮಿಲಿಯನ್ ಟ್ವಿಟರ್ ಬಳಕೆದಾರರಲ್ಲಿ 0.2 ಶೇಕಡಾಕ್ಕಿಂತ ಕಡಿಮೆ ಬಳಕೆದಾರರು ಮಾತ್ರ ಟ್ವಿಟರ್ ಬ್ಲು ಟಿಕ್ ಗಾಗಿ ಹಣ ಪಾವತಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!