ಲಾಹೋರ್: ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿದ್ದು, ಪಾಕಿಸ್ತಾನ ನಲುಗಿ ಹೋಗಿದೆ. ಭಾರತದ ಈ ದಾಳಿಯ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಹೀಗಾಗಿ ಇದೀಗ ಅಮೆರಿಕ ಅಲರ್ಟ್ ಆಗಿದೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ಡ್ರೋನ್ ಹೊಡೆದುರುಳಿಸಿದ ನಂತರ, ಅಮೆರಿಕಾದ ದೂತಾವಾಸ ಕಚೇರಿ ತನ್ನ ಸಿಬ್ಬಂದಿ ಹಾಗೂ ಲಾಹೋರ್‌ನಲ್ಲಿರುವ ಎಲ್ಲಾ ಅಮೆರಿಕದ ನಾಗರಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ ಅಮೆರಿಕದ ಪ್ರಜೆಗಳು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅಮೆರಿಕ ಸೂಚನೆ ನೀಡಿದೆ.
ಇತ್ತೀಚೆಗೆ ಈ ಭಾಗದಲ್ಲಿ ಡ್ರೋನ್ ದಾಳಿಗಳು ಹೆಚ್ಚಳವಾಗಿದ್ದು, ಈ ದಾಳಿಯ ಮೂಲ ಇನ್ನಷ್ಟೇ ತಿಳಿಯಬೇಕಿದೆ. ಹೀಗಾಗಿ ಅಮೆರಿಕಾದ ಕಾನ್ಸುಲೇಟ್ ಈ ಪ್ರದೇಶದ ತನ್ನ ನಾಗರಿಕರಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದೆ.