ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಕಿಡಿಗೇಡಿಗಳ ಗುಂಪೊಂದು ನಿನ್ನೆಯಷ್ಟೇ (ಜ.24) ಹಲ್ಲೆ ಮಾಡಿ ಜಗದೀಶ್, ಅವರ ಪುತ್ರ ಮತ್ತು ಗನ್ ಮ್ಯಾನ್ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿತ್ತು.
ಈ ವೇಳೆ ಗಲಾಟೆಯಲ್ಲಿ ಜಗದೀಶ್ ಗನ್ಮ್ಯಾನ್ ಓಪನ್ ಫೈರಿಂಗ್ ಮಾಡಿದ್ದರು. ಈ ಸಂಬಂಧ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಈ ದೂರಿನ ಆಧಾರದ ಮೇಲೆ ಲಾಯರ್ ಜಗದೀಶ್ರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದು, ಕರ್ನಾಟಕದಲ್ಲಿ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಸದ್ಯ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಿದ್ದು, ಲಾಯರ್ ಜಗದೀಶ್, ಅವರ ಗನ್ ಮ್ಯಾನ್ ಹಾಗೂ ಜಗದೀಶ್ ಅವರ ಪುತ್ರನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.