Sunday, January 19, 2025
Homeಟಾಪ್ ನ್ಯೂಸ್ಪ್ಯಾನ್-ಆಧಾರ್ ಕಾರ್ಡ್ ಜೋಡಣೆ : ಇಲ್ಲಿದೆ ಉಪಯುಕ್ತ ಮಾಹಿತಿ

ಪ್ಯಾನ್-ಆಧಾರ್ ಕಾರ್ಡ್ ಜೋಡಣೆ : ಇಲ್ಲಿದೆ ಉಪಯುಕ್ತ ಮಾಹಿತಿ

ಪ್ಯಾನ್ ಕಾರ್ಡ್‌ ಹಾಗೂ ಆಧಾರ್ ಕಾರ್ಡ್ ನಂಬರ್‌ಗಳ ಜೋಡಣೆಯ ಗಡುವು ಮಾರ್ಚ್ 31 ಅಂತ್ಯವಾಗಲಿದೆ. ಈ ಹಿನ್ನೆಲೆ ಎಲ್ಲೆಲ್ಲೂ ಜನರು ಪ್ಯಾನ್ – ಆಧಾರ್ ನಂಬರ್ಗಳನ್ನು ಜೋಡಣೆ ಮಾಡುವುದರಲ್ಲಿ ನಿರತವಾಗಿದ್ದು, ಮತ್ತೆ ಗಡುವು ವಿಸ್ತರಣೆಯಾಗಲಿದೆಯೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ.

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ ಲಿಂಕ್‌ಗೆ ಕೇಂದ್ರಿಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಹಲವಾರು ಬಾರಿ ಗಡುವನ್ನು ವಿಸ್ತರಿಸಿದೆ. ಆದರೆ, ಈ ಬಾರಿಯೂ ಮತ್ತೆ ಗಡುವನ್ನು ವಿಸ್ತರಿಸುವ ಸಾಧ್ಯತೆಗಳು ತೀರಾ ಕಡಿಮೆ ಇದ್ದು, ಗಡುವನ್ನು ವಿಸ್ತರಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸಿಬಿಡಿಟಿಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಲಿಂಕ್ ಮಾಡದಿದ್ರೆ ಬೀಳುತ್ತೆ ದಂಡ: ಈ ಬಾರಿಯು ಸಹ ದಂಡದೊಂದಿಗೆ ಈ ನಿಯಮವನ್ನು ಮತ್ತಷ್ಟು ಬಿಗಿ ಮಾಡಲಾಗಿದೆ. ಮಾರ್ಚ್ 31ರವರೆಗೆ 1,000 ರೂ. ದಂಡದೊಂದಿಗೆ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಲು ಅವಕಾಶವಿದೆ. ಮಾರ್ಚ್ 31ರೊಳಗೆ ಲಿಂಕ್ ಆಗದಿದ್ದರೆ, ಏಪ್ರಿಲ್ 1ರ ಬಳಿಕ ಪ್ಯಾನ್ ನಿಷ್ಕ್ರಿಯವಾಗಲಿದ್ದು, ಹೊಸ ಪ್ಯಾನ್ ಕಾರ್ಡ್ ಪಡೆದು ಲಿಂಕ್ ಮಾಡಲು 10,000 ರೂ. ದಂಡ ತೆರಬೇಕಾಗುತ್ತದೆ.

ಎಸ್ಎಂಎಸ್ ಮೂಲಕ ಲಿಂಕ್ ಮಾಡಿ: ಎಸ್ಎಂಎಸ್ ಮೂಲಕವೂ ನೀವು ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದಾಗಿದೆ. UIDPAN (ಸ್ಪೇಸ್) 12 ಅಂಕಿಯ ಆಧಾರ್ ಸಂಖ್ಯೆ (ಸ್ಪೇಸ್) 10 ಅಂಕಿಯ ಪ್ಯಾನ್ ಸಂಖ್ಯೆಯನ್ನು ಟೈಪ್ ಮಾಡಿ. ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 567678 ಅಥವಾ 56161 ಗೆ ಎಸ್ಎಂಎಸ್ ಕಳುಹಿಸಿ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದು.

ಪ್ಯಾನ್-ಆಧಾರ್ ಲಿಂಕ್ ಹೇಗೆ ಮಾಡುವುದು?: ಮೊದಲಿಗೆ ನೀವು https://www.incometax.gov.in/iec/foportal/ ಜಾಲತಾಣಕ್ಕೆ ಹೋಗಿ, ಅಲ್ಲಿ ಎಡಭಾಗದಲ್ಲಿರುವ ‘ಲಿಂಕ್ ಆಧಾರ್’ ಎನ್ನುವ ಆಯ್ಕೆ ಕ್ಲಿಕ್ ಮಾಡಿ, ಆಗ ಮಾಹಿತಿ ತೆರೆದುಕೊಳ್ಳುತ್ತದೆ. ಅಥವಾ ಡೈರೆಕ್ಟ್ ಆಗಿ https://eportal.incometax.gov.in/iec/foservices/#/pre-login/bl-link-aadhaar 1,000 ರೂ. ಶುಲ್ಕ ಪಾವತಿಸಿ ಆಧಾರ್ – ಪ್ಯಾನ್ ಲಿಂಕ್ ಮಾಡಬಹುದು.

ಹೆಚ್ಚಿನ ಸುದ್ದಿ

error: Content is protected !!