Friday, March 13, 2026
Homeದೇಶಕಾಶ್ಮೀರದ ನೂತನ ಸುರಂಗ ಮಾರ್ಗ ಸಮೀಪ ಭೂಕುಸಿತ: ಸೇನಾ ವಾಹನಕ್ಕೆ ಹಾನಿ

ಕಾಶ್ಮೀರದ ನೂತನ ಸುರಂಗ ಮಾರ್ಗ ಸಮೀಪ ಭೂಕುಸಿತ: ಸೇನಾ ವಾಹನಕ್ಕೆ ಹಾನಿ

ನವದೆಹಲಿ: ಇತ್ತೀಚೆಗಷ್ಟೇ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ನಿರ್ಮಿಸಿ ಉದ್ಘಾಟನೆಗೊಂಡಿದ್ದ ಸುರಂಗದ ಬಳಿ ಕಲ್ಲುಗಳು ಜಾರಿ ಬಿದ್ದಿದ್ದು ಸೇನಾ ವಾಹನಕ್ಕೆ ಹಾನಿಯಾಗಿದೆ.

ರಾಂಬಾನ್ ಡಿಸಿ ಮುಸರ್ರತ್ ಇಸ್ಲಾಂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಅಪಾಯಕಾರಿ ಎಂದೆನಿಸಿರುವ ವಲಯಗಳನ್ನು ಗುರುತಿಸುವಂತೆ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

880 ಮೀಟರ್ ಉದ್ದದ T5 ಸುರಂಗ ಮಾರ್ಚ್ 16ರಂದು ಉದ್ಘಾಟನೆಗೊಂಡಿತ್ತು.

ಘಟನೆಯಿಂದ ಇದೇ ದಾರಿಯಲ್ಲಿ ಸಾಗುತ್ತಿದ್ದ ಸೇನಾ ವಾಹನಕ್ಕೆ ಹಾನಿಯಾಗಿದೆ. ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!