Saturday, March 15, 2025
Homeಟಾಪ್ ನ್ಯೂಸ್HDK : ಯಾವ ಡೌಟೇ ಇಲ್ಲ.. ಸರ್ಕಾರ ನನ್ನನ್ನ ಟಾರ್ಗೆಟ್ ಮಾಡಿದೆ- ಕುಮಾರಸ್ವಾಮಿ ಆರೋಪ

HDK : ಯಾವ ಡೌಟೇ ಇಲ್ಲ.. ಸರ್ಕಾರ ನನ್ನನ್ನ ಟಾರ್ಗೆಟ್ ಮಾಡಿದೆ- ಕುಮಾರಸ್ವಾಮಿ ಆರೋಪ

ಬೆಂಗಳೂರು : ರಾಮನಗರ ಜಿಲ್ಲೆಯ ಬಿಡದಿ ಕೇತಗಾನಹಳ್ಳಿಯ ಸರ್ಕಾರಿ ಭೂ ಒತ್ತುವರಿ ಆರೋಪ ಪ್ರಕರಣ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮನ್ನು ಟಾರ್ಗೆಟ್ ಮಾಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಗದೊಮ್ಮೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳಿಂದ ಸರ್ವೇ ಕಾರ್ಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೇತಗಾನಹಳ್ಳಿ ಜಮೀನು 40 ವರ್ಷಗಳ ಹಿಂದೆ ಖರೀದಿ ಮಾಡಿದ್ದು. 40 ವರ್ಷಗಳ ಹಿಂದೆಯೇ ಹಲವು ಬಾರಿ ಸರ್ವೇ ಮಾಡಿದ್ದಾರೆ. ಹತ್ತಾರು ಬಾರಿ ತನಿಖೆಗಳೂ ನಡೆದಿವೆ ಎಂದರು.

1986-87ರಲ್ಲಿ ಸಿಎಂ ಲಿಂಗಪ್ಪ, ರಾಮಚಂದ್ರಪ್ಪ ಎಂಬುವವರು ದೂರು ನೀಡಿದ್ದರು. ಅಂದಿನ ಸಿಎಂ, ಪ್ರಧಾನಿ, ಗೃಹ ಸಚಿವರಿಗೆ ಅರ್ಜಿ ಹಾಕಿ ಕಾನೂನುಬಾಹಿರ ಭೂಮಿ ಖರೀದಿ ಮಾಡಿದ್ದಾರೆ ಎಂದು ಅರ್ಜಿ ಹಾಕಿದ್ದರು. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ ಎಂದ ಹೆಚ್​​​​​​​​​​​​ಡಿಕೆ 40 ವರ್ಷಗಳಿಂದ ನನ್ನ ಬಳಿ ಯಾರು ಬಂದಿರಲಿಲ್ಲ. ಇರಲಿ…ನಾನು ತನಿಖೆಗೆ ಮುಕ್ತವಾಗಿ ಇದ್ದೇನೆ ಎಂದು ಹೇಳಿದರು.

ಇನ್ನು 2023 ಮಾರ್ಚ್ ‌ನಲ್ಲಿ ಲೋಕಾಯುಕ್ತಗೆ ವರದಿ ‌ಕೊಟ್ಟಿದ್ದಾರೆ. ಪದೇ ಪದೇ ಮಾಧ್ಯಮದವರು ಕುಮಾರಸ್ವಾಮಿ ಮತ್ತು ಸಂಬಂಧಿಕರು ಅಂತ ಹೇಳುತ್ತಿದ್ದೀರಿ. ಇದು ಡಿಸಿ ತಮ್ಮಣ್ಣ ಮತ್ತು ಮಾದೇಗೌಡರು ನಡುವೆ ಆಗಿದ್ದು. ಮಾದೇಗೌಡರು ದೂರು ಕೊಟ್ಡಿದ್ದರು. ಅದರ ಮೇಲೆ ಲೋಕಾಯುಕ್ತ ತನಿಖೆ ಸೂಚಿಸಿದ್ದರು. ಅವರ ನಡುವೆ ವಿವಾದ ಇರೋದು ಅವರಿಬ್ಬರ ನಡುವೆ. ನನ್ನ ಹೆಸರು ಯಾಕೆ ಬಂತುಗೊತ್ತಿಲ್ಲ. ಹೀಗಾಗಿ ನನ್ನನ್ನು ಕಾಂಗ್ರೆಸ್​​​​ ಟಾರ್ಗೆಟ್ ಮಾಡುತ್ತಿದೆ ಎಂಬುವುದರಲ್ಲಿ ಯಾವ ಡೌಟೇ ಇಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.

ಹೆಚ್ಚಿನ ಸುದ್ದಿ

error: Content is protected !!