Monday, May 18, 2026
Homeದೇಶಲಕ್ಷದ್ವೀಪ ಸಂಸದನ ಅನರ್ಹತೆ ರದ್ದು: ಏನಿದು ಪ್ರಕರಣ?

ಲಕ್ಷದ್ವೀಪ ಸಂಸದನ ಅನರ್ಹತೆ ರದ್ದು: ಏನಿದು ಪ್ರಕರಣ?

ನವದೆಹಲಿ: ರಾಹುಲ್ ಗಾಂಧಿ ಅನರ್ಹತೆ ಪ್ರಕರಣ ಸುದ್ದಿಯಾಗುತ್ತಿರುವ ನಡುವೆಯೇ ಮತ್ತೊಂದು ಪ್ರಕರಣದಲ್ಲಿ ಲಕ್ಷದ್ವೀಪದ ಸಂಸದರೊಬ್ಬರ ಅನರ್ಹತೆಯನ್ನು ಲೋಕಸಭಾ ಸೆಕ್ರಟರಿಯೇಟ್ ವಾಪಸ್ ಪಡೆದಿದೆ.

ಕೊಲೆಯತ್ನ ಪ್ರಕರಣವೊಂದರಲ್ಲಿ ಸಂಸದ ಮುಹಮ್ಮದ್ ಫೈಝಲ್ ದೋಷಿ ಎಂದು ಘೋಷಿಸಿದ್ದ ಲಕ್ಷದ್ವೀಪ ಸೆಷನ್ಸ್ ಕೋರ್ಟ್ ತೀರ್ಪನ್ನ ಕೇರಳ ಹೈಕೋರ್ಟ್ ಜನವರಿ 25ರಂದು ವಜಾಗೊಳಿಸಿತ್ತು.

ಕೋರ್ಟ್ ಆದೇಶ ವಜಾಗೊಂಡಿದ್ದರೂ ತನ್ನ ಅನರ್ಹತೆಯನ್ನು ಪ್ರಶ್ನಿಸಿ ಫೈಝಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಯುವ ಮೊದಲೇ ಸೆಕ್ರಟರಿಯೇಟ್ ಫೈಝಲ್ ಸದಸ್ಯತ್ವವನ್ನು ಮರುಸ್ಥಾಪಿಸಿದೆ.

2023ರ ಜನವರಿ 11ರಂದು ಕೊಲೆಯತ್ನ ಪ್ರಕರಣವೊಂದರಲ್ಲಿ ಫೈಝಲ್ ದೋಷಿ ಎಂದು ಘೋಷಿಸಿದ್ದ ಸೆಷನ್ಸ್ ಕೋರ್ಟ್ ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಫೈಝಲ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. 2023ರ ಜನವರಿ 25ರಂದು ಹೈಕೋರ್ಟ್ ಸೆಷನ್ಸ್ ಕೋರ್ಟ್ ಆದೇಶವನ್ನು ವಜಾಗೊಳಿಸಿತ್ತು.

ಈ ಬೆಳವಣಿಗೆಗೂ ಕೆಲವು ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಅನರ್ಹತೆ ಪ್ರಕರಣ‌ ದೇಶಾದ್ಯಂತ ಸುದ್ದಿಯಾಗಿತ್ತು.‌ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ದೋಷಿ ಎಂದು ಕೋರ್ಟ್ ತೀರ್ಪಿತ್ತ ನಂತರ ಸಂಸದ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.

ಹೆಚ್ಚಿನ ಸುದ್ದಿ

Change Language »
error: Content is protected !!