ಮಾಜಿ ಸಿಎಂ ಕುಮಾರಸ್ವಾಮಿ ಅವರು ರ್ಯಾಲಿ ನಡೆಸುತ್ತಿದ್ದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಮಮತೆಯಿಂದ ಮುತ್ತು ಕೊಟ್ಟಿರುವ ಘಟನೆ ಸಾಕಷ್ಟು ಗಮನ ಸೆಳೆದಿದೆ.
ಬೆಂಗಳೂರಿನ ಯಶವಂತಪುರದಲ್ಲಿ ಪಂಚರತ್ನ ಯಾತ್ರೆ ನಡೆಸುವಾಗ, ಹೆಚ್‌ಡಿಕೆ ವಾಹನದ ಮೇಲೆ ಏರಿದ ಮಹಿಳಾ ಅಭಿಮಾನಿ ತಮ್ಮ ನೆಚ್ಚಿನ ನಾಯಕರನ್ನು ಮಾತನಾಡಿಸಿದ್ದಾರೆ. ಅಲ್ಲದೆ ವಾಹನದಿಂದ ವಾಪಸ್ ತೆರಳುವ ಸಂದರ್ಭದಲ್ಲಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.
ಮೊದಲು ಕುಮಾರಸ್ವಾಮಿ ಅವರಿಗೆ ಕೈಕುಲುಕಿ ಮಾತನಾಡಿದ ಮಹಿಳೆ ನಂತರ ಪ್ರೀತಿಯಿಂದ ಮುತ್ತುಕೊಟ್ಟರು. ಆ ಬಳಿಕ ಹೆಚ್‌ಡಿ ಕೆ ಜನರತ್ತ ಕೈಬೀಸಿ ಯಾತ್ರೆ ಮುನ್ನಡೆಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಿಳೆ, “ಕುಮಾರಸ್ವಾಮಿ ಅವರನ್ನು ಟಿವಿಯಲ್ಲಿ ಮಾತ್ರ ನೋಡಿದ್ದೆ. ಮೊದಲು ಹೋದ ಕೂಡಲೇ ಥ್ಯಾಂಕ್ಸ್ ಕೊಟ್ಟರು. ಬಳಿಕ ಎಲ್ಲಿಂದ ಬಂದಿದ್ದೀಯಾ ತಂಗಿ ಅಂತ ಕೇಳಿದ್ರು. ಚೆನ್ನಾಗಿದ್ದೀರಾ ಅಂತ ಕೇಳಿದ್ದಕ್ಕೆ ಚೆನ್ನಾಗಿದ್ದೀನಿ ಅಂದ್ರು, ಬಳಿಕ ಯಾವ ಊರವ್ವ, ಎಷ್ಟು ಜನ ಮಕ್ಕಳು ಅಂತ ಕೇಳಿದರು. ನಾನು ಭದ್ರಾವತಿ, ಮೂವರು ಮಕ್ಕಳೊಂದಿಗೆ ಇಲ್ಲೇ ನೆಲೆಸಿದ್ದೀನಿ ಅಂದೆ” ಎಂದು ತಿಳಿಸಿದ್ದಾರೆ.