ಕುವೈತ್ : ಅಧಿಕೃತ ವಿಶ್ವವಿದ್ಯಾಲಯಗಳಿಂದ ಪಡೆದ ಪದವಿ, ಡಿಪ್ಲೋಮೋ ಅಥವಾ ತತ್ಸಮಾನ ವಿದ್ಯಾರ್ಹತೆ ಇಲ್ಲದಿರುವ ಚಾಲಕರ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಕುವೈತ್ ಸರ್ಕಾರ ನಿರ್ಣಯಿಸಿದೆ. ಇದರಿಂದಾಗಿ ಕುವೈತ್‍ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗರೂ ಸೇರಿದಂತೆ 3 ಲಕ್ಷ ಮಂದಿ ಭಾರತೀಯ ಚಾಲಕರಿಗೆ ತೊಂದರೆಯಾಗಲಿದೆ. ಜೊತೆಗೆ ಟ್ಯಾಂಕಿ ಕಂಪನಿಗಳು ಸಹ ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ.
ಪದವಿ ಹೊಂದಿಲ್ಲದ ಅಥವಾ ದೈನಂದಿನ 600 ದಿನಾರ್‍ಗಿಂತ ಕಡಿಮೆ ಸಂಬಳ ಪಡೆಯುತ್ತಿರುವ ವಿದೇಶಿ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಮುಂದಾಗಿರುವುದನ್ನು ಅಲ್ಲಿನ ಗೃಹಸಚಿವಾಲಯ ಖಚಿತಪಡಿಸಿದೆ. ಜೊತೆಗೆ ವಾಹನ ದಟ್ಟಣೆ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯವೆಂದು ಹೇಳಿಕೊಂಡಿದೆ.