ಚಿತ್ರದುರ್ಗ: ಪಾಜೆಕ್ಟ್ ಟೈಗರ್ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಮೋದಿ ಭೇಟಿ ಕುರಿತು ಮಾತನಾಡಿದ ಕುಮಾರಸ್ವಾಮಿ, ಮೋದಿಯವರು ಹುಲಿ, ಚಿರತೆ ದಾಳಿಗೊಳಗಾದವರ ಕುಟುಂಬ ಭೇಟಿ ಮಾಡಬಹುದಿತ್ತು ಆದ್ರೆ ಅವರು ಹುಲಿ ಭೇಟಿ ಮಾಡೋಕೆ ಹೋಗಿದ್ದಾರೆ.. ಮೋದಿಗೆ ವನ್ಯಜೀವಿಗಳ ಮೇಲೆ ಇರುವ ಕಾಳಜಿ ಜನರ ಮೇಲಿಲ್ಲ. ಇದು ಮೋದಿ ಸಫಾರಿನೋ.. ಸುಪಾರಿನೋ ಎಂದು ಲೇವಡಿ ಮಾಡಿದ್ರು..
ಕೇವಲ ರಾಜಕೀಯ ಉದ್ದೇಶದಿಂದ ಕರ್ನಾಟಕಕ್ಕೆ ಭೇಟಿ ಮಾಡುತ್ತಿರುವ ಮೋದಿಯವರಿಗೆ ಜನಸಾಮಾನ್ಯರ ಕಷ್ಟಗಳು ಕಾಣುತ್ತಿಲ್ಲ.. ವನ್ಯಜೀವಿ ಸಂರಕ್ಷಕ ಜನರ ಸಂರಕ್ಷಕನೂ ಆಗಬೇಕಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ