ಬೆಂಗಳೂರು: ಹಾಸನ ಟಿಕೆಟ್ ವಿಚಾರ ಜೆಡಿಎಸ್ ಪಾಲಿಗೆ ತಲೆನೋವೇ ಸರಿ. ಇಂದು ಬೆಂಗೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನ ಟಿಕೆಟ್ ವಿಚಾರದ ಕುರಿತು ಮಾತನಾಡಿದ್ದಾರೆ.
ಪಕ್ಷದ ಬೆಳೆವಣಿಗೆ ಮುಖ್ಯ, ಪಕ್ಷದ ಕಾರ್ಯಕರ್ತರು ಮುಖ್ಯ, ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎನ್ನುವ ಮೂಲಕ ಭವಾನಿಗೆ ಟಿಕೆಟ್ ನೀಡೋದು ಬಹುತೇಕ ಡೌಟ್ ಎಂಬಂತೆ ಮಾತನಾಡಿದ್ದಾರೆ
ಕುಟುಂಬದದಿಂದ ಸ್ಪರ್ಧೆ ಮಾಡೋದು ಅಂದರೆ ಗೊಂದಲ, ಜನರ ಮನಸ್ಸಿನಲ್ಲಿ ಬೇರೆ ಭಾವನೆ ಮೂಡುತ್ತೆ. ಸಾರ್ವಜನಿಕವಾಗಿ ಟೀಕೆಗೆ ಒಳಗಾದೋದು ಬೇಡ ಅನ್ನೋದು ನನ್ನ ಅಭಿಪ್ರಾಯ ಎಂದ ಕುಮಾರಸ್ವಾಮಿ ನನ್ನ ತೀರ್ಮಾನ ಅಚಲವಾಗಿದೆ. ಹಾಸನ ಅಭ್ಯರ್ಥಿ ವಿಚಾರದಲ್ಲಿ ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದ್ರು.
ಇನ್ನು ಎರಡು ಮೂರು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಆಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದ್ರು.