ಗದಗ: ರಾಜ್ಯದಲ್ಲಿ ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಮ್ಮ ಮೇಲ್ ಇ.ಡಿ ಎಂಬ ಸೀಳು ನಾಯಿಯನ್ನು ನಮ್ಮಮೇಲೆ ಛೂ ಬಿಟ್ಟಿದೆ.ಇದು ನಿಸ್ಸಂದೇಹವಾಗಿ ಪೊಲಿಟಿಕಲ್ ಅಟ್ಯಾಕ್ ಎಂದು ಕೇಂದ್ರದ ವಿರುದ್ಧ ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿ ಕಾರಿದ್ದಾರೆ.
ಕೇಂದ್ರದ ಅಧೀನದಲ್ಲಿ ಬರುವ ಜಾರಿ ನಿರ್ದೇಶನಾಲಯ ಪ್ರಾಮಾಣಿಕವಾಗಿ ತನಿಖೆ ನಡೆಸುವ ಸಂಸ್ಥೆಯಾಗಿ ಉಳಿದಿಲ್ಲ, ಈಗ ಅದು ರಾಜಕೀಯವಾಗಿ ವಿಚ್ ಹಂಟಿಂಗ್ ಏಜೆನ್ಸಿ ಎಂದಿದ್ದಾರೆ. ದೇಶದಾದ್ಯಂತ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡೋಕೆ, ವಿರೋಧ ಪಕ್ಷದ ನಾಯಕರನ್ನು ಬೆದರಿಸಲು ಮಾತ್ರವೇ ಇಡಿ ಸೀಮಿತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ದೇಶದಲ್ಲಿ ಇ.ಡಿ ಬಿಜೆಪಿಯ ಒಂದು ಅಂಗ ಸಂಸ್ಥೆಯಾಗಿದೆ. ಈ ಅಂಗ ಸಂಸ್ಥೆ ಕೆಲಸ ಕೇವಲ ರಾಜಕೀಯ ವಿರೋಧಿಗಳನ್ನು ಕಟ್ಟಿ ಹಾಕುವುದು ಮಾತ್ರ. ರಾಜಕೀಯ ವಿರೋಧಿಗಳಿಗೆ ಹಿಟ್ ಆಂಡ್ ರನ್ ಮಾಡೋದು ಇವರ ಕೆಲಸ ಎಂದು ಆರೋಪಿಸಿದ್ದಾರೆ.