Thursday, March 27, 2025
Homeಟಾಪ್ ನ್ಯೂಸ್ಮೋದಿ ರಾಜ್ಯಕ್ಕೆ ಮೇಕಪ್ ಮಾಡಲು ಬರ್ತಿದ್ದಾರೆ: ಡಿಕೆಶಿ

ಮೋದಿ ರಾಜ್ಯಕ್ಕೆ ಮೇಕಪ್ ಮಾಡಲು ಬರ್ತಿದ್ದಾರೆ: ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ನಿರುದ್ಯೋಗ ನಿವಾರಿಸಲು ಸರ್ಕಾರಿ ಹುದ್ದೆಗಳ ಭರ್ತಿಯೊಂದಿಗೆ ಖಾಸಗಿ ಉದ್ಯೋಗದ ವಿನಿಮಯ ಕೇಂದ್ರ ಸ್ಥಾಪಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಹೀಗಾಗಿ ನಿರುದ್ಯೋಗಿಗಳ ಅನುಕೂಲಕ್ಕಾಗಿ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲಾಗುವುದು. ನಿರುದ್ಯೋಗಿಗಳು ಈ ವಿನಿಯಮ ಕೇಂದ್ರದ ಮೂಲಕ ಉದ್ಯೋಗದ ಮಾಹಿತಿ ಪಡೆದುಕೊಳ್ಳಲು ಸಹಾಯಕವಾಗಲಿದೆ ಎಂದರು.

ಬಿಜೆಪಿ ಪಕ್ಷ ರಾಜ್ಯದಲ್ಲಿ ವೀಕ್ ಆಗಿದೆ ಎಂದು ಅರ್ಥ ಆಗಿದೆ. ಬಿಜೆಪಿ ರಾಜ್ಯದಲ್ಲಿ 60 ರಿಂದ 65 ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು. ಈಗಾಗಲೇ ಬಿಜೆಪಿ ರಾಜ್ಯದಲ್ಲಿ ಸೋಲನ್ನು ಒಪ್ಪಿಕೊಳ್ತಿದ್ದಾರೆ. ಏನೋ ಮೇಕಪ್ ಮಾಡಲು ನರೇಂದ್ರ ಮೋದಿ ಬರ್ತಿದ್ದಾರೆ ಎಂದರು.
ಪಕ್ಷದಲ್ಲಿ ಬಂಡಾಯ ವಿಚಾರವಾಗಿ, ಕಾಂಗ್ರೆಸ್ ಪಾರ್ಟಿ ಸಮುದ್ರ ಇದ್ದಂತೆ. ನೂರಾರು ಹೊಳೆಗಳು ಬಂದು ಸಮುದ್ರಕ್ಕೆ ಸೇರಿಕೊಳ್ಳುತ್ತವೆ. ಎಷ್ಟು ಜನ ಬೇರೆ ಪಾರ್ಟಿಗಳಿಂದ ಕಾಂಗ್ರೆಸ್ ಗೆ ಬಂದಿಲ್ವಾ, ನಾಳೆ ಶಿವಲಿಂಗೇಗೌಡ ಪಕ್ಷ ಸೇರ್ತಿದ್ದಾರೆ. ನಾನೂ ಕೂಡಾ ಅಲ್ಲಿಗೆ ಹೋಗ್ತಿದ್ದೀನಿ ಎಂದರು.

ಹೆಚ್ಚಿನ ಸುದ್ದಿ

error: Content is protected !!