ಈ ಕುರಿತು ಶನಿವಾರ ಮುಂಜಾನೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್ , ಮಹದೇವಪುರ ಶಾಸಕ ಅಭ್ಯರ್ಥಿಯಾಗಿ ಹಾಲಿ ಶಾಸಕ ನಾಗೇಶ್‍ಗೆ ಟಿಕೆಟ್ ನೀಡಿದ್ದು ಬಿಟ್ಟರೆ ಮತ್ಯಾವುದೇ ತಿದ್ದುಪಡಿಯಿಲ್ಲ ಎಂದಿದ್ದಾರೆ.
ಮೋದಿ ಆಗಮನದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಮೋದಿ ಮುಖ ನೋಡಿ ಜನರು ವೋಟ್ ಹಾಕಬೇಕಿದೆ. ಹಾಗಾಗಿ ಪ್ರಧಾನಿ ಮೋದಿ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು.
ಎರಡನೇ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಎಲ್ಲರನ್ನೂ ಸಮಾಧಾನಪಡಿಸುವ ಕೆಲಸ ನಡೆಯುತ್ತಿದೆ. ಅಸಮಾಧಾನಿತರೊಂದಿಗೆ ಸಂಧಾನ ನಡೆಯುತ್ತಿದೆ ಎಂದಿದ್ದಾರೆ.