Sunday, January 25, 2026
Homeಟಾಪ್ ನ್ಯೂಸ್KOPPAL : ಕೋಟ್ಯಾಧಿಪತಿಯಾದ ಕೊಪ್ಪಳದ ಹುಲಿಗೆಮ್ಮ - 44 ದಿನದಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತೇ?

KOPPAL : ಕೋಟ್ಯಾಧಿಪತಿಯಾದ ಕೊಪ್ಪಳದ ಹುಲಿಗೆಮ್ಮ – 44 ದಿನದಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತೇ?

ಕೊಪ್ಪಳ : ಕೊಪ್ಪಳ (Koppal) ತಾಲೂಕಿನ ಹುಲಿಗಿಯಲ್ಲಿರುವ ಪ್ರಸಿದ್ಧ ದೇವತೆ ಶ್ರೀ ಹುಲಿಗೆಮ್ಮ (Huligemma) ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ.

ಹುಂಡಿಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಆಭರಣ ಸಂಗ್ರಹವಾಗಿದ್ದು, ಕಳೆದ 44 ದಿನಗಳಲ್ಲಿ ದೇವಸ್ಥಾನದಲ್ಲಿ ಒಟ್ಟು 1.09 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಭಕ್ತರಿಂದ 90 ಗ್ರಾಂ ಬಂಗಾರ ಹಾಗೂ 4.70 ಕೆಜಿ ಬೆಳ್ಳಿ ಆಭರಣಗಳು ಸಮರ್ಪಣೆಯಾಗಿವೆ.ನವೆಂಬರ್ 24ರಂದು ನಡೆದ ಹಿಂದಿನ ಹುಂಡಿ ಎಣಿಕೆಯಲ್ಲಿ 87.26 ಲಕ್ಷ ರೂಪಾಯಿ ಸಂಗ್ರಹ ದಾಖಲಾಗಿತ್ತು. ಇದೀಗ ಹುಂಡಿ ಹಣ ಒಂದು ಕೋಟಿ ರೂಪಾಯಿ ಗಡಿ ದಾಟಿರುವುದು ವಿಶೇಷವಾಗಿದೆ.

ಹುಲಿಗೆಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಪ್ರಕ್ರಿಯೆಯನ್ನು ಬಿಗಿ ಪೊಲೀಸ್ ಭದ್ರತೆ ಮತ್ತು ನಿಗಾದಲ್ಲಿ ನಡೆಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉಪಸ್ಥಿತಿಯಲ್ಲಿ ಪಾರದರ್ಶಕವಾಗಿ ಎಣಿಕೆ ಕಾರ್ಯ ಪೂರ್ಣಗೊಳಿಸಲಾಗಿದೆ.

ಹುಲಿಗೆಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದ್ರೆ ಸಕಲ ಇಷ್ಟಾರ್ಥ ಸಿದ್ಧಿಸುತ್ತೆ ಎಂಬ ನಂಬಿಕೆ ಅನೇಕ ವರ್ಷಗಳಿಂದ ಜನರಲ್ಲಿ ಇದೆ. ಇತ್ತೀಚಿನ ವರ್ಷಗಳಲ್ಲಿ ಈ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ : ಯುವಕನ ಮೇಲೆ ರಾಕ್ಷಸಿಯಂತೆ ಹಲ್ಲೆ ನಡೆಸಿದ್ದ ಸುಜಾತಾ – ಹುಬ್ಬಳ್ಳಿ ಸಂತ್ರಸ್ತೆಯ ಹಳೆಯ ವಿಡಿಯೋ ವೈರಲ್! VIDEO 

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!