Wednesday, February 19, 2025
Homeಟಾಪ್ ನ್ಯೂಸ್REPUBLIC DAY : 76ನೇ ಗಣರಾಜ್ಯೋತ್ಸಒಕ್ಕೆ ಕೌಂಟ್ ಡೌನ್ - ಈ ಬಾರಿಯ ವಿಶೇಷ ಅತಿಥಿಗಳು...

REPUBLIC DAY : 76ನೇ ಗಣರಾಜ್ಯೋತ್ಸಒಕ್ಕೆ ಕೌಂಟ್ ಡೌನ್ – ಈ ಬಾರಿಯ ವಿಶೇಷ ಅತಿಥಿಗಳು ಯಾರು ಗೊತ್ತಾ ..?

ನವದೆಹಲಿ: ಭಾರತ 76 ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕೆಂಪು ಕೋಟೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತದ ಮಿತ್ರ ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಆಗಮಿಸುತ್ತಿದ್ದು, ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಗಣರಾಜ್ಯೋತ್ಸವದ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ 1952, 1953 ಮತ್ತು 1966 ಹೊರತುಪಡಿಸಿ ಪ್ರತಿ ವರ್ಷ ಕೂಡ ಗಣರಾಜ್ಯೋತ್ಸವ ಪರೇಡ್‌ ಗಳಲ್ಲಿ ವಿದೇಶಿ ನಾಯಕರು ಅತಿಥಿಗಳಾಗಿ ಭಾಗವಹಿಸಿದ್ದಾರೆ.ಕಳೆದ 5 ವರ್ಷದಲ್ಲಿ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳನ್ನು ಗಮನಿಸಿದರೆ, 2018 ರಲ್ಲಿ, 10 ರಾಷ್ಟ್ರಗಳ ಮುಖ್ಯಸ್ಥರನ್ನು ಒಳಗೊಂಡ ಸಂಪೂರ್ಣ ಆಗ್ನೇಯ ಏಷ್ಯಾ ರಾಷ್ಟ್ರಗಳ (ASEAN) ನಾಯಕತ್ವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಉಪಸ್ಥಿತರಿದ್ದರು.

ಆ ನಂತರ ಭೂತಾನ್ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಎರಡು ಬಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
2020 ರಲ್ಲಿ, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮುಖ್ಯ ಅತಿಥಿಯಾಗಿದ್ದರು. ಆ ನಂತರ 2021 ಮತ್ತು 2022 ರಲ್ಲಿ ಯಾವುದೇ ವಿದೇಶಿ ನಾಯಕರು ಕೂಡ ಗಣರಾಜ್ಯೋತ್ಸವದಲಿ ಭಾಗಿಯಾಗಿಲ್ಲ.

ಇನ್ನು 2023 ರಲ್ಲಿ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಳೆದ ವರ್ಷದ ಗಣರಾಜ್ಯ ದಿನದಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿದ್ದರು.

ಹೆಚ್ಚಿನ ಸುದ್ದಿ

error: Content is protected !!