ಸೌತ್ ಆಫ್ರಿಕಾ (South Africa) ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ (Team India) 4 ವಿಕೆಟ್ ಗಳಿಂದ ಸೋಲನುಭವಿಸಿದ್ದು, ಈ ಮೂಲಕ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ. ಇದೀಗ ಪಂದ್ಯದ ವಿಡಿಯೋವೊಂದು ವೈರಲ್ (Viral Video) ಆಗಿದೆ.
ರಾಯ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್ ಶತಕಗಳ ನೆರವಿನೊಂದಿಗೆ ಭಾರತ ತಂಡವು 5 ವಿಕೆಟ್ ನಷ್ಟಕ್ಕೆ 358 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ (110) ಶತಕ ಸಿಡಿಸಿದರೆ, ಮ್ಯಾಥ್ಯೂ ಬ್ರೀಟ್ಝ್ಕೆ (68) ಹಾಗೂ ಡೆವಾಲ್ಡ್ ಬ್ರೆವಿಸ್ (54) ಅರ್ಧಶತಕದ ನೆರವಿನಿಂದ 49.2 ಓವರ್ಗಳಲ್ಲಿ 362 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿತು.
ಮೈದಾನದಲ್ಲಿ ಕನ್ನಡದಲ್ಲೇ ಮಾತಾಡಿದ ನಾಯಕ ರಾಹುಲ್
ಟೀಂ ಇಂಡಿಯಾವು ಸವಾಲಿನ ಮೊತ್ತ ಕಲೆಹಾಕಿತ್ತಾದರೂ ಎಂಟನೇ ಕ್ರಮಾಂಕದವರೆಗೂ ರನ್ ಹೊಳೆ ಹರಿಸಬಲ್ಲ ಆಟಗಾರರಿರುವ ದಕ್ಷಿಣ ಆಫ್ರಿಕಾ ತಂಡವನ್ನು ಗುರಿಯೊಳಗೆ ಕಟ್ಟಿಹಾಕುವುದು ಕಷ್ಟ. ಹೀಗಾಗಿ ಸ್ವಾಭಾವಿಕವಾಗಿ ನಾಯಕ ರಾಹುಲ್ ಮೇಲೆ ಒತ್ತಡವಿತ್ತು.
ಟೋನಿ ಡಿ ಝೂರ್ಝಿ ಬ್ಯಾಟಿಂಗ್ ವೇಳೆ ರಾಹುಲ್‌ಗಿದ್ದ ಒತ್ತಡ ಬಹಿರಂಗಗೊಂಡಿದೆ. ಪಂದ್ಯ ಅಂತಿಮ ಹಂತ ತಲುಪಿದಾಗ, ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಬೌಲಿಂಗ್ ಮಾಡುವ ಸಮಯದಲ್ಲಿ ಕೆಎಲ್ ರಾಹುಲ್ ವಿಶೇಷ ಸೂಚನೆ ನೀಡಿದರು. ಸಾಮಾನ್ಯವಾಗಿ ಶಾಂತವಾಗಿ ಮಾತನಾಡುವ ರಾಹುಲ್, ಈ ಬಾರಿ ಪ್ರಸಿದ್ಧ್ ಗೆ ಬೌನ್ಸರ್ ಬೇಡ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಪ್ರಸಿದ್ಧ್, ನಿನ್ ತಲೆ ಓಡಿಸ್ಕೊಳ್ಬೇಡ… ಹೇಳಿದ್ದು ಹಾಕು, ನಾನು ಹೇಳಿದುದನ್ನೇ ಹಾಕು” ಎಂದು ಕನ್ನಡದಲ್ಲಿ ಕ್ಲಾಸ್ ತೆಗೆದುಕೊಂಡರು. ಬ್ಯಾಟ್ಸ್‌ಮನ್‌ಗೆ ತಂತ್ರ ಅರ್ಥವಾಗಬಾರದು ಎಂಬ ಕಾರಣಕ್ಕೆ ಇಬ್ಬರೂ ಕನ್ನಡದಲ್ಲೇ ಚರ್ಚೆ ಮುಂದುವರೆಸಿದರು.
ಪಂದ್ಯದ ನಡುವೆ Prasidh Krishna ಅವರಿಗೆ KL Rahul ರವರ ವಿಶೇಷ ಕಿವಿಮಾತು!👏🏻🗣
📺 ವೀಕ್ಷಿಸಿ | #INDvSA 👉 2nd ODI | LIVE NOW | ನಿಮ್ಮ Star Sports 2 ಕನ್ನಡ & JioHotstar ನಲ್ಲಿ.#TeamIndia pic.twitter.com/OkNN2aqkMc
— Star Sports Kannada (@StarSportsKan) December 3, 2025
ರಾಹುಲ್ ಮಾತಿಗೆ ಪ್ರಸಿದ್ಧ್ ಕೃಷ್ಣ ಉತ್ತರಿಸಿದ್ದು, ತಲೆಗೆ ಹಾಕ್ಲಾ? ಎಂದು ಪ್ರಶ್ನಿಸಿದ್ದಾರೆ. ರಾಹುಲ್ ತಲೆಗೆಲ್ಲ ಬೇಡ ಈಗ’, ‘ಹೇಳಿ ಬಂದಿದ್ದೀನಿ ತಲೆಗೆ ಹಾಕ್ತಾ ಇದಿಯಲ್ಲ ಮಗಾ.. ಎಂದು ಅಸಮಾಧಾನದಿಂದ ಉತ್ತರ ನೀಡಿದ್ದಾರೆ. ನಾಯಕ ರಾಹುಲ್ ಹಾಗೂ ಬೌಲರ್ ಪ್ರಸಿದ್ ಕೃಷ್ಣ ನಡುವಿನ ಈ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಇದೇ ಮೊದಲೆಲ್ಲ ಈ ಹಿಂದೆ ಕೂಡ ಪ್ರಸಿದ್ಧ್ ಕೃಷ್ಣ ಹಾಗೂ ಕೆಎಲ್ ರಾಹುಲ್ ಮೈದಾನದಲ್ಲಿ ಕನ್ನಡದಲ್ಲೇ ಮಾತಾಡಿದ್ದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.