Sunday, July 19, 2026
Homeಟಾಪ್ ನ್ಯೂಸ್JOCKEY-42: ಕಿರಣ್‌ ರಾಜ್‌ಗೆ ಜೋಡಿಯಾದ ಹೃತಿಕಾ, ಜಾಕಿ-42 ಸಿನಿಮಾದ ಹೊಸ ಅಪ್ಡೇಟ್‌

JOCKEY-42: ಕಿರಣ್‌ ರಾಜ್‌ಗೆ ಜೋಡಿಯಾದ ಹೃತಿಕಾ, ಜಾಕಿ-42 ಸಿನಿಮಾದ ಹೊಸ ಅಪ್ಡೇಟ್‌

ಬೆಂಗಳೂರು: ಕನ್ನಡತಿ (Kannadati) ಖ್ಯಾತಿಯ ಕಿರಣ್ ರಾಜ್ (Kiran Raj) ಸದ್ಯ ಕರ್ಣನಾಗಿ ಸಿರೀಯಲ್‌ವೊಂದರಲ್ಲಿ ಮಿಂಚುತ್ತಿದ್ಧಾರೆ. ಈಗಾಲೇ ಒಂದು ಸಿನಿಮಾ ಮಾಡಿರುವ ನಟ ಮತ್ತೊಂದು ಸಿನಿಮಾಗೆ ಬಣ್ಣ ಹಚ್ಚಲು ತಯಾರಾಗಿದ್ದು, ಜಾಕಿ-42 (Jockey-42) ಅನ್ನೋ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. ಇದೀಗ ಈ ಸಿನಿಮಾದ ಹೀರೋಯಿನ್‌ ಯಾರು ಎನ್ನುವ ವಿಚಾರ ಸಹ ಬೆಳಕಿಗೆ ಬಂದಿದ್ದು, ಯಾರು ಆ ಸುಂದರಿ ಇಲ್ಲಿದೆ ನೋಡಿ.

 ಹೃತಿಕಾ ಶ್ರೀನಿವಾಸ್ ಹೀರೋಯಿನ್
ಸಿನಿಮಾ ತಂಡ ನೀಡಿರುವ ಮಾಹಿತಿ ಪ್ರಕಾರ ನಟಿ ಹೃತಿಕಾ ಶ್ರೀನಿವಾಸ್‌, ಜಾಕಿ-42 ಸಿನಿಮಾದ ಹೀರೋಯಿನ್‌ ಆಗಿ ಆಯ್ಕೆ ಆಗಿದ್ದು, ಈಗಾಗಲೇ 3 ಸಿನಿಮಾಗಳನ್ನ ಮಾಡಿರುವ ನಟಿ ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗು ಸಿನಿಮಾ ನಂತರ ಜಾಕಿ-42 ಸಿನಿಮಾ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಹೃತಿಕಾ ಶ್ರೀನಿವಾಸ್ ಈಗಾಗಲೇ ಆರಾಮ್‌ ಅರವಿಂದ್‌ ಸ್ವಾಮಿ, ಉಡಾಳ್‌, ಔಟ್‌ ಆಫ್‌ ಸಿಲಬಸ್‌ ಹೀಗೆ 3 ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ನಟನೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಿನಿಮಾದಲ್ಲಿ ಹೃತಿಕಾ ಶ್ರೀನಿವಾಸ್ ಮಾರ್ಡನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಇವರ ಪಾತ್ರಕ್ಕೆ ಎರಡು ಶೇಡ್‌ ಇದೆ ಎಂದೂ ಸಹ ಹೇಳಲಾಗುತ್ತಿದೆ.

ಇದನ್ನೂ ಓದಿ: ಕಿಸ್ ಮಾಡೋಕೆ ಬಂದ ಖ್ಯಾತ ನಟ…ಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ!

ಇನ್ನು ಕಿರಣ್‌ ರಾಜ್‌ ಸಹ ಈ ಸಿನಿಮಾ ಬಗ್ಗೆ ಆಗಾಗ ಅಪ್ಡೇಟ್‌ ಕೊಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಅವರು ಸಿನಿಮಾದಲ್ಲಿನ ತಮ್ಮ ಲುಕ್‌ ಫೋಟೋವನ್ನು ಸಹ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಹಾಗೆಯೇ, ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆಗಿದೆ.  ಅತಿ ಶೀಘ್ರದಲ್ಲಿಯೇ ಟೀಸರ್ ರಿಲೀಸ್ ಮಾಡಲು ಸಹ ಪ್ಲಾನ್ ಕೂಡ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

 

View this post on Instagram

 

A post shared by Kiran Raj (@itskiranraj)

 ಕುದುರೆ ರೇಸ್ ಕಥೆ ಸಿನಿಮಾ
ಚಿತ್ರತಂಡ ನೀಡಿರುವ ಮಾಹಿತಿಯ ಪ್ರಕಾರ ಈ ಜಾಕಿ-42 ಸಿನಿಂಆದಲ್ಲಿ ಕುದುರೆ ರೇಸ್ ಕಥೆ ಇದೆ. ಬೆಂಗಳೂರಿನಲ್ಲಿಯೇ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದ್ದು, ಗುರುತೇಜ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಗೋಲ್ಡನ್‌ ಗೇಟ್‌ ಸ್ಟುಡಿಯೋಸ್‌ ಬ್ಯಾನ್ರ್‌ ಅಡಿಯಲ್ಲಿ ಭಾರತಿ ಸತ್ಯನಾರಾಯಣ್‌ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ವಿನೋದ್ ಯಜಮಾನಿ ಜಾಕಿ 42 ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಈ ಜಾಕಿ-42 ಸಿನಿಮಾದಲ್ಲಿ ತೆಲುಗು ಮತ್ತು ತಮಿಳು ಭಾಷೆಯ ಕಲಾವಿದರೂ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ನೋ ಬಿಪಿ..ಬೀ ಹ್ಯಾಪಿ – ಬೇಲ್ ಟೆನ್ಶನ್ ನಡುವೆ ಪ್ರೊಫೈಲ್ ಪಿಕ್ ಚೇಂಜ್ ಮಾಡಿದ ಪವಿತ್ರಗೌಡ

ರಾನಿ ಸಿನಿಮಾದಲ್ಲಿ ಮೋಡಿ ಮಾಡಿದ್ದ ನಟ
ಕಿರಣ್‌ ರಾಜ್‌ ಕನ್ನಡತಿ ಸಿರೀಯಲ್‌ ನಂತರ ರಾನಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ರಾನಿ ಚಿತ್ರದಲ್ಲಿ ನಾಯಕನಾಗಿ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡದ್ದಾರೆ. ರಾನಿ ಚಿತ್ರದಲ್ಲಿ ನಾಯಕನಾಗಿ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!