ಬೆಂಗಳೂರು : ನಗರದಲ್ಲಿ ಕಿಲ್ಲರ್ ಬಿಎಂಟಿಸಿ ಗೆ (BMTC) ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಗೆ ಬೈಕ್ (Bike) ಡಿಕ್ಕಿಯಾಗಿ (Accident) ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರ ರಸ್ತೆಯಲ್ಲಿ ನಡೆದಿದೆ.
ಆ ಮೂಲಕ ಬಿಎಂಟಿಸಿ ಸಿಲುಕಿ ಪ್ರಾಣ ಕಲೆಸುಕೊಳ್ಳುವವರ ಸಾವಿನ ಸರಣಿ ಮುಂದುವರೆದಿದೆ.
ಇದನ್ನೂ ಓದಿ : ಮೊಸಳೆ ಆಹಾರ ಕೇಸ್, ಹಂತಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!
28 ವರ್ಷದ ಕಣಿರಾಜ್ ಮೃತ ದುರ್ದೈವಿ. ಬೈಕ್ ಸವಾರನ ತಲೆಯ ಮೇಲೆ ಬಿಎಂಟಿಸಿ ಬಸ್ ನ ಹಿಂಬದಿ ಚಕ್ರ ಹರಿದ ಪ್ರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಣಿರಾಜ್ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುವ ವೇಳೆ ಆಯತಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ ಕಣಿರಾಜ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆಯ ಮಾಹಿತಿ ತಿಳಿದು ಅಪಘಾತ ನಡೆದ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.