Saturday, March 15, 2025
Homeಕ್ರೀಡೆCCL 2025: ಇದೇ ಮೊದಲ ಬಾರಿಗೆ ಮೈಸೂರಲ್ಲಿ ನಡೆಯಲಿದೆ CCL-2025 ಫೈನಲ್ ಪಂದ್ಯಾವಳಿ- ಕಿಚ್ಚ ಸುದೀಪ್

CCL 2025: ಇದೇ ಮೊದಲ ಬಾರಿಗೆ ಮೈಸೂರಲ್ಲಿ ನಡೆಯಲಿದೆ CCL-2025 ಫೈನಲ್ ಪಂದ್ಯಾವಳಿ- ಕಿಚ್ಚ ಸುದೀಪ್

ಬೆಂಗಳೂರು: ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ.

ಹೌದು.. ಈ ಕುರಿತು ನಟ ಕಿಚ್ಚ ಸುದೀಪ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಈ ವಿಷಯವನ್ನು ಘೋಷಣೆ ಮಾಡೋದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ಸಿಸಿಎಲ್ 2025 ಪಂದ್ಯಾವಳಿಗಳು ಮೈಸೂರಿಗೂ ಕಾಲಿಡುತ್ತಿವೆ. ಎರಡು ಸೆಮಿ ಫೈನಲ್ ಹಾಗೂ ಒಂದು ಫೈನಲ್ ಪಂದ್ಯಾವಳಿಯನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಾರ್ಚ್ 1ರಂದು ಸೆಮಿ ಫೈನಲ್ ಹಾಗೂ ಮಾರ್ಚ್ 2ರಂದು ಫೈನಲ್ ಸಿಸಿಎಲ್ 2025ರ ಪಂದ್ಯಾವಳಿಗಳು ಮೈಸೂರಿನಲ್ಲಿ ನಡೆಯಲಿವೆ ಎಂದಿದ್ದಾರೆ.

ಫೆ. 8 ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಪ್ರಾರಂಭವಾಗಿದ್ದು, ಬಾಲಿವುಡ್ ಮತ್ತು ಪ್ರಾದೇಶಿಕ ಚಲನಚಿತ್ರ ತಾರೆಯರನ್ನು ಒಳಗೊಂಡ ರೋಮಾಂಚಕ ಪಂದ್ಯಗಳು ನಡೆಯುತ್ತಿವೆ.

ಹೆಚ್ಚಿನ ಸುದ್ದಿ

error: Content is protected !!