ಕೆಲಸಕ್ಕೆಂದು ಕೇರಳಕ್ಕೆ ಬಂದು ಅಸ್ಸಾಂನ ಕಾರ್ಮಿಕರೊಬ್ಬರು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅಸ್ಸಾಂ ಮೂಲದ ವಲಸೆ ಕಾರ್ಮಿಕ ಆಲ್ಬರ್ಟ್ ಟಿಗಾ ಅವರು ಕೇರಳ ರಾಜ್ಯ ಲಾಟರಿಯಲ್ಲಿ ಬರೋಬ್ಬರಿ 10 ಕೋಟಿ ರೂಗಳನ್ನು ಗೆದ್ದಿದ್ದಾರೆ.
ಆಲ್ಬರ್ಟ್ ಗಿಟ್ಟಾ ಅವರುಚಿತ್ರ ನಟಿ ಹಾಗೂ ಧಾರಾವಾಹಿ ತಾರೆ ರಜಿನಿ ಚಾಂಡಿ ಅವರ ಮನೆಯಲ್ಲಿ ಕೆಲಸಕ್ಕಿದ್ದರು. ಆಲ್ಬರ್ಟ್‌ಗೆ ಲಾಟರಿ ಬಂದಿರುವುದನ್ನು ನಟಿ ರಜಿನಿ ಕೂಡಾ ಖಚಿತಪಡಿಸಿದ್ದಾರೆ.
ಆಲ್ಬರ್ಟ್ ಆಲುವಾದಿಂದ ಟಿಕೆಟ್ ಖರೀದಿಸಿದ್ದರು. ತೆರಿಗೆ ಕಡಿತದ ಬಳಿಕ ಆಲ್ಬರ್ಟ್‌ಗೆ 6.6 ಕೋಟಿ ರೂ.ಗಳು ಲಭಿಸಿದ್ದು, ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ.
ಇತ್ತೀಚೆಗೆ ಕೇರಳದಲ್ಲಿ ಮತ್ತೋರ್ವ ವಲಸೆ ಕಾರ್ಮಿಕನಿಗೆ ಲಾಟರಿ ಬಂದಿತ್ತು. 75 ಲಕ್ಷ ರೂ.ಗಳ ಲಾಟರಿಯು ಕೊಲ್ಕತ್ತಾ ಮೂಲದ ಎಸ್‌ಕೆ ಬಾದೇಶ್ ಎಂಬಾತನಿಗೆ ಬಂದಿದ್ದು, ತನ್ನಿಂದ ಯಾರಾದರೂ ಟಿಕೆಟ್ ಕಸಿಯುತ್ತಾರೆ ಎಂಬ ಭಯದಿಂದ ಸ್ಥಳಿಯ ಪೊಲೀಸ್ ಠಾಣೆಗೆ ತೆರಳಿ ಆಶ್ರಯ ಪಡೆದ ಬಾದೇಶ್ ಸುದ್ದಿಯಾಗಿದ್ದರು.