ಯೆಮನ್‌ನಲ್ಲಿ (Yemen) ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್ ರಿಲೀಫ್ ಸಿಕ್ಕಿದ್ದು, ಸತತ ಪ್ರಯತ್ನದ ಫಲವಾಗಿ ಮರಣದಂಡನೆ ಶಿಕ್ಷೆಯನ್ನು ಯುಮೆನ್ ರದ್ದುಗೊಳಿಸಿದೆ.
ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ದೇಶದಾದ್ಯಂತ ಸಾಕಷ್ಟು ಕೂಗು ಕೇಳಿ ಬಂದಿತ್ತು.. ಅದರಂತೆ ಇದೀಗ ಎರಡು ದೇಶದ ಮುಖಂಡರ ಸತತ ಪ್ರಯತ್ನದ ಫಲವಾಗಿ ನರ್ಸ್ ನಿಮಿಷಾ ಪ್ರಿಯಾರಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಯುಮೆನ್ ರದ್ದು ಪಡಿಸಿದೆ.
ಈ ಬಗ್ಗೆ ಧರ್ಮಭೋದಕ, ಜಾಗತಿಕ ಶಾಂತಿ ಪ್ರವರ್ತಕರಾದ ಡಾ. ಕೆ.ಎ ಪೌಲ್ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದು, ಯುಮೆನ್ ಮುಖಂಡರ ಪ್ರಭಾವಶಾಲಿ ಹಾಗೂ ಪ್ರಾರ್ಥನಾ ಪೂರ್ವಕ ಪ್ರಯತ್ನಗಳಿಗೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಏನಿದು ಪ್ರಕರಣ.?
ನಿಮಿಷಾ ಪ್ರಿಯಾ ಅವರು ಕೇರಳದವರಾಗಿದ್ದು, 2011 ರಲ್ಲಿ ನರ್ಸಿಂಗ್ ತರಬೇತಿ ಮುಗಿಸಿ ಯೆಮೆನ್‌ಗೆ ತೆರಳಿದರು. ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಈ ನಿರ್ಧಾರ ಕೈಗೊಂಡಿದ್ದರು. ಆರಂಭದಲ್ಲಿ ಅವರು ಯೆಮೆನ್‌ನ ಕೆಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರು. ನಂತರ ಅಲ್ಲಿಯೇ ಸ್ವಂತ ಕ್ಲಿನಿಕ್ ತೆರೆಯಲು ನಿರ್ಧರಿಸಿದರು.
ಅದರಂತೆ 2014 ರಲ್ಲಿ ಅವರಿಗೆ ತಲಲ್ ಅಬ್ದೊ ಮಹದಿ ಎಂಬುವವರ ಪರಿಚಯವಾಯಿತು. ಅವರು ಕ್ಲಿನಿಕ್ ತೆರೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಯೆಮೆನ್ ಕಾನೂನಿನ ಪ್ರಕಾರ, ವಿದೇಶಿಯರು ವ್ಯಾಪಾರ ಮಾಡಲು ಸ್ಥಳೀಯರೊಂದಿಗೆ ಪಾಲುದಾರಿಕೆ ಹೊಂದಿರಬೇಕು. ಅದರಂತೆ, ಇಬ್ಬರೂ ಒಪ್ಪಂದ ಮಾಡಿಕೊಂಡು ಕ್ಲಿನಿಕ್ ತೆರೆದರು.
ಇದನ್ನು ಓದಿ : ಮುಂಬೈ ರೈಲು ಸ್ಪೋಟದ ಆರೋಪಿಗಳ ಖುಲಾಸೆ – ಸುಪ್ರೀಂ ಮೆಟ್ಟಿಲೇರಿದ ಮಹಾ ಸರ್ಕಾರ!
ಆದರೆ ಕೆಲ ಸಮಯದಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಮೆಹದಿ ಅವರು ತಮ್ಮ ಪಾಸ್‌ಪೋರ್ಟ್ ಕದ್ದಿದ್ದಾರೆ. ಇದರಿಂದ ತಮ್ಮನ್ನು ಅವರು ಯೆಮೆನ್ ಬಿಟ್ಟು ಹೋಗದಂತೆ ತಡೆಯಲು ಪ್ರಯತ್ನಿಸಿದ್ದಾರೆ. ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಿಯಾ ಕಾನೂನಿನ ಮೊರೆ ಹೋಗಿದ್ದರು.
ಈ ವೇಳೆ ಮೆಹದಿಯನ್ನು ಬಂಧಿಸಿ ಕೆಲ ತಿಂಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. 2017ರಲ್ಲಿ ನಿಮಿಷಾ, ಮೆಹದಿಗೆ ನಿದ್ರಾಜನಕ ಚುಚ್ಚುಮದ್ದನ್ನು ನೀಡಿದ್ದಾಳೆ. ಅದು ಅತಿಯಾಗಿದ್ದರಿಂದ ಆತ ಮೃತಪಟ್ಟಿದ್ದಾನೆ. ಘಟನೆ ಬಳಿಕ ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಆಕೆಯನ್ನು ಬಂಧಿಸಲಾಯಿತು. ಬಳಿಕ 2018 ರಲ್ಲಿ ಕೊಲೆ ಆರೋಪ ಹೊರಿಸಲಾಯಿತು.
ಅದರಂತೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರಿಯಳಿಗೆ ಜುಲೈ 16 ರಂದುಗಲ್ಲಿಗೇರಿಸಲು ಯುಮೆನ್ ಕೋರ್ಟ್ ಆದೇಶಿಸಿತ್ತು. ಆದರೆ ಭಾರತದಿಂದ ಸುಪ್ರೀಂ ಕೋರ್ಟ್ ನಲ್ಲಿ ಪ್ರಿಯಾರನ್ನು ವಾಪಸ್ ಕರೆತರಲು ಅರ್ಜಿ ಸಲ್ಲಿಸಿದ್ದರಿಂದ ಗಲ್ಲಿಗೇರಿಸುವುದನ್ನು ಮುಂದೂಡಲಾಗಿತ್ತು. ಅದರಂತೆ ಇದೀಗ ಯುಮೆನ್ ಗಲ್ಲು ಶಿಕ್ಷೆಯನ್ನು ರದ್ದು ಮಾಡಿದ್ದು, ಸದ್ಯದಲ್ಲೇ ಭಾರತಕ್ಕೆ ಕರೆತರಲಾಗುತ್ತದೆ ಎಂದು ತಿಳಿದು ಬಂದಿದೆ.