Monday, June 15, 2026
Homeಟಾಪ್ ನ್ಯೂಸ್KERALAM: ನನಗೆ ಆಡಂಬರ ಬೇಡ.. ಕನಿಷ್ಠ ಸೆಕ್ಯೂರಿಟಿ ಸಿಕ್ರೆ ಸಾಕು ಎಂದ ಕೇರಳಂನ ನೂತನ ಸಿಎಂ!

KERALAM: ನನಗೆ ಆಡಂಬರ ಬೇಡ.. ಕನಿಷ್ಠ ಸೆಕ್ಯೂರಿಟಿ ಸಿಕ್ರೆ ಸಾಕು ಎಂದ ಕೇರಳಂನ ನೂತನ ಸಿಎಂ!

ಕೇರಳಂ : ಇಲ್ಲಿನ (Kerala) ರಾಜಕೀಯ ಇತಿಹಾಸದಲ್ಲಿ ಇದೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ಸಾಮಾನ್ಯವಾಗಿ ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳು ಭಾರೀ ಭದ್ರತೆ (Security) ಮತ್ತು ಬೆಂಗಾವಲು ವಾಹನಗಳ (Escort vehicles) ನಡುವೆ ಸಂಚರಿಸುವುದು ರೂಢಿ. ಆದರೆ, ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿ.ಡಿ. ಸತೀಶನ್ (VD Satishan) ಅವರು ಈ ಅದ್ದೂರಿತನಕ್ಕೆ ತಿಲಾಂಜಲಿ ಹಾಡಲು ನಿರ್ಧರಿಸಿದ್ದಾರೆ. ಅಧಿಕಾರ ಎನ್ನುವುದು ಜನಸೇವೆಗೇ ಹೊರತು ಪ್ರದರ್ಶನಕ್ಕಲ್ಲ ಎಂಬ ಸಂದೇಶವನ್ನು ತಮ್ಮ ನಡವಳಿಕೆಯ ಮೂಲಕ ಸಾರುತ್ತಿದ್ದಾರೆ.

ತಮ್ಮ ದೈನಂದಿನ ಸಂಚಾರದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ತಮಗೆ ನೀಡಲಾಗಿದ್ದ ಸುಸಜ್ಜಿತ ಭದ್ರತಾ ವ್ಯವಸ್ಥೆಯನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವಾಗ ಟ್ರಾಫಿಕ್ ನಿರ್ಬಂಧಿಸುವುದು ಅಥವಾ ಸೈರನ್ ಬಳಸಿ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡುವುದನ್ನು ಅವರು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ಈ ಮೂಲಕ ಆಡಳಿತ ಯಂತ್ರ ಜನರ ಹತ್ತಿರವಿರಬೇಕು ಎಂಬ ಆಶಯಕ್ಕೆ ಜೀವ ತುಂಬಿದ್ದಾರೆ.

ಇದನ್ನೂ ಓದಿ : ಕೇರಳಂ ಸಿಎಂ ಗದ್ದುಗೆಗೆ ಆಯ್ಕೆಗೆ ಸೋನಿಯಾ ಗಾಂಧಿ ಯಾರ ಸಲಹೆ ಕೇಳಿದ್ದರು ಗೊತ್ತೇ?

ವಿ.ಡಿ ಸಟಿಶನ್ ಅವರ ಈ ನಿರ್ಧಾರ ಕೇವಲ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಕನಿಷ್ಠ ಭದ್ರತಾ ಸಿಬ್ಬಂದಿಯೊಂದಿಗೆ ಸಾಮಾನ್ಯರಂತೆ ಓಡಾಡುವ ಅವರ ಈ ಗುಣ ರಾಜ್ಯದ ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಹಿರಿಯ ಅಧಿಕಾರಿಗಳು ಕೂಡ ಮುಖ್ಯಮಂತ್ರಿಗಳ ಈ ಮಾದರಿಯನ್ನು ಅನುಸರಿಸಲು ಮುಂದಾಗುತ್ತಿರುವುದು ಆಡಳಿತದಲ್ಲಿ ಕಂಡುಬರುತ್ತಿರುವ ಸಕಾರಾತ್ಮಕ ಬದಲಾವಣೆಯಾಗಿದೆ.

ವಿ.ಡಿ. ಸತೀಶನ್ ಅವರು ಕೈಗೊಂಡಿರುವ ಈ ನಿರ್ಧಾರ ಭಾರತೀಯ ಪ್ರಜಾಪ್ರಭುತ್ವದಲ್ಲಿ ‘ವಿಐಪಿ ಸಂಸ್ಕೃತಿ’ಗೆ ನೀಡಿದ ದೊಡ್ಡ ಪೆಟ್ಟಾಗಿದೆ. ಒಬ್ಬ ಮುಖ್ಯಮಂತ್ರಿ ಮನಸ್ಸು ಮಾಡಿದರೆ ಭದ್ರತೆಯ ಹೆಸರಿನಲ್ಲಿ ನಡೆಯುವ ಅನಗತ್ಯ ವೆಚ್ಚ ಮತ್ತು ಸಾರ್ವಜನಿಕ ಕಿರಿಕಿರಿಯನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ಅವರು ಜ್ವಲಂತ ಉದಾಹರಣೆಯಾಗಿದ್ದಾರೆ. ಅಧಿಕಾರ ಎನ್ನುವುದು ಜನರಿಂದ ದೂರವಿರುವುದಲ್ಲ, ಬದಲಾಗಿ ಜನರ ನಡುವೆ ಇದ್ದು ಕೆಲಸ ಮಾಡುವುದು ಎಂಬ ತತ್ವವನ್ನು ಅವರು ಅಕ್ಷರಶಃ ಪಾಲಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!