Wednesday, December 4, 2024
Homeಟಾಪ್ ನ್ಯೂಸ್TRAGEDY : ರೈಲ್ವೆ ಹಳಿ ಸ್ವಚ್ಛತೆ ವೇಳೆ ರೈಲು ಡಿಕ್ಕಿ, ನಾಲ್ವರು ಕಾರ್ಮಿಕರ ದುರ್ಮರಣ!- VIDEO

TRAGEDY : ರೈಲ್ವೆ ಹಳಿ ಸ್ವಚ್ಛತೆ ವೇಳೆ ರೈಲು ಡಿಕ್ಕಿ, ನಾಲ್ವರು ಕಾರ್ಮಿಕರ ದುರ್ಮರಣ!- VIDEO

ಕೇರಳ : ರೈಲ್ವೆ ಸೇತುವೆ ಸ್ವಚ್ಛಗೊಳಿಸುವಾಗ ರೈಲು ಡಿಕ್ಕಿಯಾಗಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಇಂದು ಪಾಲಕ್ಕಾಡ್ ಜಿಲ್ಲೆಯ ಶೋರನೂರ್ ರೈಲ್ವೆ ನಿಲ್ದಾಣ ಸಮೀಪದ ಸೇತುವೆ ಮೇಲೆ ನಡೆದಿದೆ.


ಶೋರನೂರು ಸೇತುವೆ ಬಳಿ ರೈಲ್ವೆ ಹಳಿಯಿಂದ ಕಸ ತೆಗೆಯುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಮತ್ತಿಬ್ಬರು ಪುರುಷ ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ.

ತಿರುವನಂತಪುರಂ ಕಡೆಗೆ ಹೋಗುವ ಕೇರಳ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಭರತಪುಳ ನದಿಗೆ ಕಟ್ಟಲಾದ ಸೇತುವೆ ಮೇಲೆ ಈ ಅನಾಹುತ ನಡೆದಿದ್ದು, ಮೂವರ ಶವ ಹೊರತೆಗೆಯಲಾಗಿದೆ. ಇನ್ನೋರ್ವ ಕಾರ್ಮಿಕನ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ.

ಹೆಚ್ಚಿನ ಸುದ್ದಿ

error: Content is protected !!