Monday, April 21, 2025
Homeಟಾಪ್ ನ್ಯೂಸ್KAVERI ARATI : ಸ್ಯಾಂಕಿ ಟ್ಯಾಂಕ್ ನಲ್ಲಿನ 'ಕಾವೇರಿ ಆರತಿ'! ಇದೊಂದು ಪುಣ್ಯದ ಕಾರ್ಯಕ್ರಮ ಎಂದ...

KAVERI ARATI : ಸ್ಯಾಂಕಿ ಟ್ಯಾಂಕ್ ನಲ್ಲಿನ ‘ಕಾವೇರಿ ಆರತಿ’! ಇದೊಂದು ಪುಣ್ಯದ ಕಾರ್ಯಕ್ರಮ ಎಂದ ಡಿಕೆಶಿ

ಬೆಂಗಳೂರು : ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ನಲ್ಲಿ ಶುಕ್ರವಾರ ಕಾವೇರಿ ಪೂಜೆ ಮಾಡಿಯೇ ಮಾಡುತ್ತೇವೆ ಎಲ್ಲರೂ ಬಂದು ಆಶೀರ್ವಾದ ಮಾಡಿ ಪುಣ್ಯ ಕೆಲಸದಲ್ಲಿ ಭಾಗವಹಿಸಿ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು, ಇದೊಂದು ಪುಣ್ಯದ ಕೆಲಸ. ನೀರನ್ನು ಪೂಜೆ ಮಾಡಿ ಸಂಭ್ರಮಿಸುವ ಕ್ಷಣವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.

ಬಿಜೆಪಿ ನಾಯಕರು ಇದೇ ವಿಚಾರವಾಗಿ ಕೋರ್ಟ್ ಗೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ತಕ್ಕ ವಾದ ಮಂಡಿಸುತ್ತೇವೆ. ಇದರಲ್ಲಿ ರಾಜಕೀಯ ಇಲ್ಲ. ವಿಜೃಂಭಣೆಯಿಂದ ಆರತಿ ಮಾಡುತ್ತೇವೆ ಎಂದಿದ್ದಾರೆ.

ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಸಮಾರಂಭಕ್ಕಾಗಿ ಉತ್ತರ ಪ್ರದೇಶದ ವಾರಣಾಸಿಯಿಂದ ಪುರೋಹಿತರನ್ನು ವಿಮಾನದ ಮೂಲಕ ಕರೆಸಲಾಗುತ್ತಿದೆ. BWSSB ಈ ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲಾ ತಯಾರಿಗಳನ್ನು ಭರದಿಂದ ನಡೆಸುತ್ತಿದೆ.ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಜೊತೆಗೆ BWSSB ಉದ್ಯೋಗಿಗಳ ಕುಟುಂಬಗಳು ಸೇರಿದಂತೆ 10,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಹೆಚ್ಚಿನ ಸುದ್ದಿ

error: Content is protected !!