ಮರೆಯಲಾಗದ ಮಾಣಿಕ್ಯ ಪುನೀತ್ ಭೌತಿಕವಾಗಿ ನಮ್ಮೊಂದಿಗಿಲ್ಲ. ಆದ್ರೆ ಅವರು ಅಭಿಮಾನಿಗಳ ಮನಗಳಲ್ಲಿ ಸದಾ ಜೀವಂತ. ಇಂದು ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌ರವರ 49 ನೇ ಹುಟ್ಟುಹಬ್ಬ. ಅವರ ಬರ್ತ್ ಡೇ ಸಂಭ್ರಮ ರಾಜ್ಯದುದ್ದಗಲಕ್ಕೂ ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಪುನೀತ್ ಉತ್ಸವ ಹೆಸರಿನಲ್ಲಿ ಇಂದು ಅಪ್ಪು ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದ್ದು, ಎಲ್ಲರಿಗೂ ದೊಡ್ಮನೆ ಮಂದಿ ಸ್ವಾಗತ ಕೋರಿದ್ದಾರೆ.
ಇಂದು ಕಂಠೀರವ ಸ್ಟುಡಿಯೋ ಆವರಣದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. 10 ಗಂಟೆಯಿಂದ ಸಂಜೆವರೆಗೂ ನಿರಂತರ ಅನ್ನ ದಾಸೋಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ 6 ಗಂಟೆಗೆ ಅಪ್ಪು ಸಂಗೀತೋತ್ಸವ ನಡೆಯಲಿದ್ದು ವಿವಿಧ ಗಾಯಕರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ 48ನೇ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತ್ರವಲ್ಲ, ಪ್ರತಿ ಜಿಲ್ಲೆ, ಪ್ರತಿ ಊರಿನಲ್ಲಿ ಕೂಡಾ ಅಪ್ಪು ಫ್ಯಾನ್ಸ್, ಅವರ ಹುಟ್ಟಿದ ದಿನ ಆಚರಿಸಲು ಸಜ್ಜಾಗಿದ್ದಾರೆ.
ಅಪ್ಪು ನಮ್ಮನ್ನಗಲಿ 2 ವರ್ಷಗಳಾಗಿದ್ರೂ ಇಂದಿಗೂ ಅವರ ಅಭಿಮಾನಿಗಳು ನೆಚ್ಚಿನ ನಟನನ್ನ ಕಳೆದುಕೊಂಡ ಬೇಸರದಲ್ಲಿದ್ದಾರೆ. ಆದರೂ ಅಪ್ಪು ಹುಟ್ಟುಹಬ್ಬ ಆಚರಿಸಲು ಅಪ್ಪು ಸಮಾಧಿಗೆ ಅದ್ದೂರಿ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ. ಅಪ್ಪು ಉತ್ಸವದ ಹೆಸರಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಜರುಗುತ್ತಿದ್ದು ಅಭಿಮಾನಿಗಳು ಸಾಗರವೇ ಕಂಠೀರವ ಸ್ಟುಡಿಯೋದತ್ತ ಹರಿದುಬರ್ತಿದೆ.
ಒಟಿಟಿಯಲ್ಲಿ ‘ಗಂಧದಗುಡಿ’ ವೀಕ್ಷಿಸಿ
ಪಿಆರ್‌ಕೆ ನಿರ್ಮಾಣದ, ಮಡ್‌ಸ್ಕಿಪ್ಪರ್ ಸಹನಿರ್ಮಾಣದ ಗಂಧದ ಗುಡಿ ಸಾಕ್ಷ್ಯಚಿತ್ರ ಇಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ. `ಗಂಧದಗುಡಿ – ಜರ್ನಿ ಆಫ್ ಎ ಟ್ರೂ ಹೀರೋ’ ಕರ್ನಾಟಕದ ವನ್ಯಸಂಪತ್ತಿನ ಅಮೋಘ ದೃಶ್ಯಕಾವ್ಯವಾಗಿದ್ದು, ಪುನೀತ್ ರಾಜ್‌ಕುಮಾರ್ ರವರ ಕಾಡಿನ ಜರ್ನಿಯನ್ನ ಇಂದು ಅವರ ಅಭಿಮಾನಿಗಳು ಕಣ್ತಂಬಿಕೊಳ್ಳಬಹುದಾಗಿದೆ.
ಇನ್ನು ಇಂದೇ ಉಪೇಂದ್ರ ಅಭಿನಯದ ಮಾರ್ಚ್ 17ಕ್ಕೆ ಕಬ್ಜ ಸಿನಿಮಾ ಬಿಡುಗಡೆ ಆಗುತ್ತಿದೆ. ಕಬ್ಜ ಸಿನಿಮಾವನ್ನು ಚಿತ್ರತಂಡವು ಪುನೀತ್ ಅವರಿಗೆ ಅರ್ಪಣೆ ಮಾಡುತ್ತಿದೆ. . ”ಕಬ್ಜ ಚಿತ್ರದ ಪೋಸ್ಟರ್ ನೋಡಿ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರದ ಕೆಲವೊಂದು ತುಣುಕುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಲ್ಲದೆ, ಈ ಚಿತ್ರಕ್ಕೆ ಬೆಂಬಲ ನೀಡುವುದಾಗಿ ಕೂಡಾ ಅಪ್ಪು ನಮ್ಮೊಂದಿಗೆ ಹೇಳಿದ್ದರು. ಈ ಎಲ್ಲಾ ಕಾರಣಗಳಿಂದ ಪುನೀತ್ ಹುಟ್ಟುಹಬ್ಬದಂದು ನಾವು ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ” ಎಂದಿದ್ದಾರೆ ನಿರ್ದೇಶಕ ಆರ್. ಚಂದ್ರು.