Saturday, May 16, 2026
Homeಟಾಪ್ ನ್ಯೂಸ್LIQUOR PRICE : ಮದ್ಯಪ್ರಿಯರಿಗೆ ಬಿಗ್ ಶಾಕ್, ಆಲ್ಕೋಹಾಲ್ ಪ್ರಮಾಣ ಆಧರಿಸಿ ಹೊಸ ತೆರಿಗೆ, ಶೇ....

LIQUOR PRICE : ಮದ್ಯಪ್ರಿಯರಿಗೆ ಬಿಗ್ ಶಾಕ್, ಆಲ್ಕೋಹಾಲ್ ಪ್ರಮಾಣ ಆಧರಿಸಿ ಹೊಸ ತೆರಿಗೆ, ಶೇ. 20 ರಷ್ಟು ಬೆಲೆ ಏರಿಕೆ ಸಾಧ್ಯತೆ!

ಬೆಂಗಳೂರು: ರಾಜ್ಯದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಭಾರಿ ಆಘಾತ ನೀಡಲು ಸಿದ್ಧತೆ ನಡೆಸಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು (Liquor Price) ಆಧರಿಸಿ ಹೊಸ ತೆರಿಗೆ (Tax) ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ (Government) ಕರಡು ಅಧಿಸೂಚನೆ ಹೊರಡಿಸಿದೆ. ಈ ಹೊಸ ನಿಯಮ ಜಾರಿಯಾದಲ್ಲಿ ವಿಸ್ಕಿ, ರಮ್, ಬ್ರಾಂಡಿ ಸೇರಿದಂತೆ ಸಾಮಾನ್ಯ ಮದ್ಯಗಳ ಬೆಲೆ ಕನಿಷ್ಠ ಶೇಕಡಾ 20 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ವಿಶೇಷವೆಂದರೆ, ಆಲ್ಕೋಹಾಲ್-ಇನ್-ಬೇವರೇಜ್ (AIB) ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವ ಭಾರತದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ.

ಈವರೆಗೆ ಮದ್ಯದ ಎಂಆರ್‌ಪಿ (MRP) ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಆರು ದಶಕಗಳ ಹಳೆಯ ನೀತಿಗೆ ತಿದ್ದುಪಡಿ ತರುತ್ತಿರುವ ಸರ್ಕಾರ, ಇನ್ನು ಮುಂದೆ ಮದ್ಯದ ಬಾಟಲಿಯ ಪ್ರಮಾಣಕ್ಕಿಂತ ಅದರಲ್ಲಿರುವ ನೈಜ ಆಲ್ಕೋಹಾಲ್ ಅಂಶದ (Alcohol by Volume – ABV) ಆಧಾರದ ಮೇಲೆ ತೆರಿಗೆ ವಿಧಿಸಲು ನಿರ್ಧರಿಸಿದೆ. ಪಾಶ್ಚಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ವ್ಯವಸ್ಥೆಯು ಈಗ ಕರ್ನಾಟಕದಲ್ಲೂ ಜಾರಿಯಾಗಲು ಸಿದ್ಧವಾಗಿದೆ. ಇದರಿಂದಾಗಿ ಮದ್ಯದಲ್ಲಿ ಆಲ್ಕೋಹಾಲ್ ಪ್ರಮಾಣ ಎಷ್ಟಿದೆಯೋ ಅದಕ್ಕೆ ತಕ್ಕಂತೆ ತೆರಿಗೆ ಪಾವತಿಸಬೇಕಾಗುತ್ತದೆ.

ಸರ್ಕಾರದ ಈ ಹೊಸ ನಿರ್ಧಾರವು ಪ್ರೀಮಿಯಂ ಮದ್ಯಗಳಿಗಿಂತ ಹೆಚ್ಚಾಗಿ ಸಾಮಾನ್ಯ ಅಥವಾ ಅಗ್ಗದ ದರದ ಮದ್ಯ ಸೇವಿಸುವವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದಲ್ಲಿ ಸರಾಸರಿ ಶೇ. 42.8 ರಷ್ಟು ಆಲ್ಕೋಹಾಲ್ ಪ್ರಮಾಣವಿರುತ್ತದೆ. ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಈ ನಾಲ್ಕು ಸ್ಲ್ಯಾಬ್‌ಗಳ ಪಾಲೇ ಶೇ. 80 ರಷ್ಟಿದೆ. ಕಳೆದ ವರ್ಷವಷ್ಟೇ 180 ಮಿಲಿ ಮದ್ಯದ ಬೆಲೆ 80 ರಿಂದ 95 ರೂಪಾಯಿಗೆ ಏರಿಕೆಯಾಗಿತ್ತು. ಹೊಸ ವ್ಯವಸ್ಥೆ ಜಾರಿಯಾದಲ್ಲಿ ಇದರ ಬೆಲೆ 105 ರಿಂದ 110 ರೂಪಾಯಿವರೆಗೆ ಜಿಗಿಯುವ ಸಾಧ್ಯತೆಯಿದೆ.

ಮದ್ಯದ ವಿಧ ನಿರೀಕ್ಷಿತ ಬದಲಾವಣೆ

ಸಾಮಾನ್ಯ ಮದ್ಯ (Economy/Cheap Liquor) – ಬೆಲೆ ಗಣನೀಯವಾಗಿ ಏರಿಕೆ (ಶೇ. 20+) ಪ್ರೀಮಿಯಂ ಮದ್ಯ (Premium Brands) – ತೆರಿಗೆ ಸ್ಲ್ಯಾಬ್‌ಗಳ ಆಧಾರದ ಮೇಲೆ ಅಲ್ಪ ಬದಲಾವಣೆ. ಬಿಯರ್ (Beer) – ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವುದರಿಂದ ತೆರಿಗೆಯಲ್ಲಿ ವ್ಯತ್ಯಾಸವಾಗಬಹುದು.

ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಬಿಗ್ ಶಾಕ್- ಮತ್ತೆ ಏರಿಕೆಯಾಗುತ್ತಾ ಮದ್ಯದ ಬೆಲೆ?

ಹೆಚ್ಚಿನ ಸುದ್ದಿ

Change Language »
error: Content is protected !!