Thursday, March 20, 2025
Homeರಾಜಕೀಯಕ್ಷೇತ್ರ ಸಿಗದೇ ಸಿದ್ದರಾಮಯ್ಯ ಪರದಾಡತ್ತಿದ್ದಾರೆ: ಹೆಚ್ ಡಿಕೆ ವ್ಯಂಗ್ಯ

ಕ್ಷೇತ್ರ ಸಿಗದೇ ಸಿದ್ದರಾಮಯ್ಯ ಪರದಾಡತ್ತಿದ್ದಾರೆ: ಹೆಚ್ ಡಿಕೆ ವ್ಯಂಗ್ಯ

ಸಿಎಂ ಆಗಿದ್ದವರು ಇದೀಗ ಸ್ಪರ್ಧಿಸಲು ಕ್ಷೇತ್ರವೇ ಸಿಗದೇ ಪರದಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಸಂಡೂರು ತಾಲೂಕಿನ ಕುರೆಕೊಪ್ಪ ಗ್ರಾಮದಲ್ಲಿ ಮಂಗಳವಾರ ಮಾತನಾಡಿದ ಅವರು, ನನ್ನ ಬಗ್ಗೆ 150ಕೋಟಿ ರೂ.ಲಂಚದ ಆರೋಪದ ಸಿಡಿ ಗತಿ ಏನಾಯ್ತು ಎನ್ನುವ ಬಗ್ಗೆ ಯಾರೂ ತಿಳಿಯುತ್ತಿಲ್ಲ, ಅವಧಿಯಲ್ಲಿ ಅಕ್ರಮಕ್ಕೆ ಅವಕಾಶವೇ ನೀಡಲಿಲ್ಲ, ಅದಕ್ಕೆ ನನ್ನ ಬಗ್ಗೆ ಸಾಕಷ್ಟು ಜನ ಅಪಪ್ರಚಾರ ಮಾಡಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ 13ಬಾರಿ ಬಜೆಟ್ ಮಂಡಿಸಿದವರಿಗೆ ಗೆಲ್ಲುವ ಕ್ಷೇತ್ರ ಸಿಗದೇ ಒದ್ದಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಏಕೆ ನಿಲ್ಲುತ್ತಿಲ್ಲ, ಅವರ‌ ಮಗನಿಗಾಗಿ ಬೇರೆ ಕ್ಷೇತ್ರ ಹುಡುಕಾಡುತ್ತಿದ್ದಾರೆ. ತಮ್ಮ ಪರಿಸ್ಥಿತಿ ಹೀಗಿರುವವರು ನಮ್ಮ ಪಕ್ಷದ ಬಗ್ಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ವಾಗ್ದಾಳಿ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಗನ ರಾಜಕೀಯ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ, ಮಗನಿಗೆ ಶಕ್ತಿ ತುಂಬಲು‌ ಮುಂದಾಗಿದ್ದಾರೆ, ಬಿ.ಎಸ್.ಯಡಿಯೂರಪ್ಪ ಅವರೂ ಮಗನಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ, ಪಕ್ಷ ಕ್ಕಿಂತ ಅವರಿಗೆ ಮಗನ‌ ಭವಿಷ್ಯವೇ ಮುಖ್ಯ, ಮಗನ ರಾಜಕೀಯ ಬಗ್ಗೆಯೇ ಚಿಂತೆ, ಇವರನ್ನು ಸೇರಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ನವರಿಗೆ ತಮ್ಮ ಮಕ್ಕಳ, ಬೆಂಬಲಿಗರ ಚಿಂತೆ. ಆದರೇ, ನನ್ನ ಚಿಂತೆ ರಾಜ್ಯದ 6ಕೋಟಿ ಜನರ ಬಗ್ಗೆ ಚಿಂತೆ, ಮತದಾರ ಪ್ರಭುಗಳು ಮುಂಬರುವ ಚುನಾವಣೆಯಲ್ಲಿ ಜೆಡಿ ಎಸ್ ಗೆ ಆರ್ಶಿವಾದಿಸಿದರೇ ಪಂಚರತ್ನ ಯೋಜನೆ ಜಾರಿಗೆ ತರುವೆ, ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ ಎಂದರು.

ಹೆಚ್ಚಿನ ಸುದ್ದಿ

error: Content is protected !!