Saturday, January 25, 2025
Homeಟಾಪ್ ನ್ಯೂಸ್ನಂಜನಗೂಡು ಕ್ಷೇತ್ರದಿಂದ ದರ್ಶನ್ ಧೃವನಾರಾಯಣ್ ಕಣಕ್ಕೆ

ನಂಜನಗೂಡು ಕ್ಷೇತ್ರದಿಂದ ದರ್ಶನ್ ಧೃವನಾರಾಯಣ್ ಕಣಕ್ಕೆ

ಬೆಂಗಳೂರು: ಕಾಂಗ್ರೆಸ್ ಕಟ್ಟಾಳು ಮಾಜಿ ಸಂಸದ ದಿವಂಗತ ಆರ್. ಧೃವನಾರಾಯಣ್ ಪುತ್ರ ದರ್ಶನ್ ಧೃವನಾರಾಯಣ್ ಚುನಾವಣಾ ಕಣಕ್ಕಿಳಿಯೋದು ಅಧಿಕೃತವಾಗಿದೆ. ಇಂದು ಹೊರಬಿದ್ದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ದರ್ಶನ್ ಧೃವನಾರಾಯಣ್ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದ ಹೆಚ್‌.ಸಿ ಮಹದೇವಪ್ಪ ಧೃವನಾರಾಯಣ್ ಪುತ್ರನಿಗಾಗಿ ಕ್ಷೇತ್ರತ್ಯಾಗ ಮಾಡೋದಾಗಿ ಹೇಳಿದ್ರು.. ಅದರಂತೆಯೇ ಮಹದೇವಪ್ಪ ನಂಜನಗೂಡು ಕ್ಷೇತ್ರ ಬಿಟ್ಟುಕೊಟ್ಟು ಟಿ.ನರಸೀಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಧೃವನಾರಾಯಣ್‌ರವರ ಜನಪರ ಕಾರ್ಯಗಳು ಹಾಗೂ ಅನುಕಂಪದ ಅಲೆಯ ಅವಕಾಶ ಬಳಸಿಕೊಂಡು ಕಾಂಗ್ರೆಸ್ ನಂಜನಗೂಡು ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಲೆಕ್ಕಾಚಾರ ಹಾಕಿದೆ

ಹೆಚ್ಚಿನ ಸುದ್ದಿ

error: Content is protected !!