ಬೆಂಗಳೂರು: ಸತ್ಯಾನ್ವೇಷಣೆ ಮತ್ತು ಸೇವೆ – ಇದು ಪತ್ರಿಕಾವೃತ್ತಿಯ ಧರ್ಮ. ಹೀಗೆಂದವರು ಮಹಾತ್ಮ ಗಾಂಧಿ. ಆದರೆ ಎನ್‌ಡಿಟಿವಿ ಇದಕ್ಕೆ ಕಳಂಕವೆಂಬಂತಿದೆ. ಏನೋ ಮಾಡಲು ಹೋಗಿ ಏನೋ ಮಾಡಿಕೊಂಡ ಪರಿಸ್ಥಿತಿಯಲ್ಲಿರುವ ಎನ್‌ಡಿಟಿವಿ, ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.
ಸಿದ್ದರಾಮಯ್ಯರವರ ಸಂದರ್ಶನ ನಡೆಸಿರುವ ಎನ್‌ಡಿಟಿವಿ, ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮಲ್ಲಿ ಪೈಪೋಟಿ ಇದೆಯಾ ಎಂದು ಪ್ರಶ್ನೆ ಮಾಡಿ ಸಿದ್ದರಾಮಯ್ಯ ಕೊಟ್ಟ ಉತ್ತರವನ್ನು ಸಂಪೂರ್ಣ ತಿರುಚಿ ಸುದ್ದಿ ಪ್ರಸಾರ ಮಾಡಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ, ಡಿಕೆಶಿ ಆಕಾಂಕ್ಷಿಗಳು, ಪ್ರಜಾಪ್ರಭುತ್ವದಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕೆಂದು ಬಯಸುವುದು ತಪ್ಪೇನಿಲ್ಲ ಎಂದು ಸಿದ್ದರಾಮಯ್ಯ ಉತ್ತರ ನೀಡಿದ್ರೆ , ಎನ್‌ಡಿಟಿವಿ ಅದನ್ನು ತಿರುಚಿ “ನಾನು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ. ಡಿಕೆ ಶಿವಕುಮಾರ್ ಅವರೂ ಆಕಾಂಕ್ಷಿ. ಆದರೆ, ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡಲಾರದು” ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ವರದಿ ಬಿತ್ತರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಬಿಜೆಪಿ ಪಕ್ಷವು ಅದಾನಿ ಒಡೆತನದ ಎನ್‌ಡಿಟಿವಿ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಯತ್ನಿಸಿದೆ ಆದ್ರ ಅದು ಸಾಧ್ಯವಿಲ್ಲ.. ಬಿಜೆಪಿಯೆಂಬ ಮುಳುತ್ತಿರುವ ಹಡಗನ್ನು ಮೊದಲು ರಕ್ಷಿಸಿಕೊಳ್ಳೀ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ